ಚಿಕ್ಕಮಗಳೂರು (02-02-2021): 15ವರ್ಷದ ಬಾಲಕಿ ಮೇಲೆ 30 ಮಂದಿ ನಿರಂತರ ಅತ್ಯಾಚಾರ ಮಾಡಿರುವ ಪೈಶಾಚಿಕ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದ್ದು, ಇಡೀ ದೇಶವನ್ನೇ ತಲೆತಗ್ಗಿಸುವಂತೆ ಮಾಡಿದೆ.
ಶೃಂಗೇರಿಯ ಗ್ರಾಮವೊಂದರಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ 30 ಜನ ಆರೋಪಿಗಳು ಕಳೆದ 5 ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರವನ್ನು ನಡೆಸಿದ್ದಾರೆ. ಯೋಗೀಶ್ ಹಾಗೂ ಅಭಿ ಎಂಬ ಅತ್ಯಾಚಾರಿಗಳು ಅಪ್ರಾಪ್ತೆಯನ್ನು ಅತ್ಯಾಚಾರಗೈದು ವಿಡಿಯೋ ಮಾಡಿಟ್ಟುಕೊಂಡಿದ್ದರು. ಅದೇ ವಿಡಿಯೋ ಬಳಸಿಕೊಂಡು ಬಾಲಕಿಯನ್ನು ಬೆದರಿಸಿ ನಿರಂತವಾಗಿ ಅತ್ಯಾಚಾರವನ್ನು ನಡೆಸಿದ್ದರು.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ 17 ಮಂದಿ ವಿರುದ್ಧ ಎಫ್.ಐ.ಆರ್ ದಾಖಲಾಗಿದ್ದು, 8 ಜನರನ್ನು ಶೃಂಗೇರಿ ಪೊಲೀಸರು ಬಂಧಿಸಿದ್ದಾರೆ.
ಅಭಿ, ಗಿರೀಶ್, ವಿಕಾಸ್, ಮಣಿಕಂಠ, ಸಂಪತ್, ಅಶ್ವಥ್, ರಾಜೇಶ್, ಅಮಿತ್, ಸಂತೋಷ್, ದೀಕ್ಷಿತ್, ಸಂತೋಷ್, ನಿರಂಜನ್, ನಯನ್, ಯೋಗೇಶ್ ಸೇರಿದಂತೆ ಬಾಲಕಿ ಸಂಬಂಧಿ ಮಹಿಳೆ ಗೀತಾ ಮೇಲೂ ಕೇಸ್ ದಾಖಲಾಗಿದೆ. ಇದೀಗ ಈ ಪ್ರಕರಣ ರಾಜ್ಯಾದ್ಯಂತ ಜನಾಕ್ರೋಶಕ್ಕೆ ಕಾರಣವಾಗಿದೆ. ಆರೋಪಿಗಳು ಹಿಂದೂ ಸಂಘಟನೆಯ ಮುಖಂಡ ಮುತಾಲಿಕ್ ಜೊತೆ ಇರುವ ಫೋಟೋ ವೈರಲ್ ಆಗಿದ್ದು, ಆರೋಪಿಗಳು ಹಿಂದೂ ಸಂಘಟನೆಯ ಕಾರ್ಯಕರ್ತರು ಎನ್ನಲಾಗಿದೆ.