ದುಬೈಯ ಫೇಮಸ್ ಶಾಪಿಂಗ್ ಫೆಸ್ಟಿವಲ್ ಯಾವಾಗ ಗೊತ್ತಾ?

duhai
Share on facebook
Share on twitter
Share on linkedin
Share on whatsapp
Share on telegram
Share on email
Share on print

ದುಬೈ (14-10-2020): ಇಪ್ಪತ್ತಾರನೇ ದುಬೈ ಶಾಪಿಂಗ್ ಫೆಸ್ಟಿವಲ್ ಈ ವರ್ಷದ ಡಿಸೆಂಬರ್ 17ರಿಂದ 2021 ಜನವರಿ 30ರ ವರೆಗೆ ನಡೆಯಲಿದೆ. ಆಯೋಜಕರಾದ ದುಬೈ ಫೆಸ್ಟಿವಲ್ಸ್ ಆ್ಯಂಡ್ ರೀಟೈಲ್ ಎಸ್ಟಾಬ್ಲಿಶ್‌ಮೆಂಟ್ ಈ ವಿಚಾರವನ್ನು ಪ್ರಕಟಿಸಿದೆ.

ಪೆಸ್ಟಿವಲ್ಲಿನ ಆರಂಭದಲ್ಲೇ ಅಂತರಾಷ್ಟ್ರೀಯ ಖ್ಯಾತಿಗಳಿಸಿದ ಸಂಗೀತಕಾರರಿಂದ ಸಂಗೀತ ಕಾರ್ಯಕ್ರಮ, ಲೈಟ್ ಆ್ಯಂಡ್ ಫೈರ್ ವರ್ಕ್ ಪ್ರದರ್ಶನಗಳು ನಡೆಯಲಿವೆ. ಅಲ್ಲದೇ ವಿವಿಧ ಮಾಲುಗಳಲ್ಲಿ ರಿಟೈಲ್ ಬ್ರಾಂಡುಗಳ ವತಿಯಿಂದ ಮನರಂಜನೆ ಕಾರ್ಯಕ್ರಮಗಳೂ, ಹೊಸ ವರ್ಷಾಚರಣೆ ಪ್ರಯುಕ್ತ ವೈವಿಧ್ಯಮಯ ಸಾಂಸ್ಕೃತಿಕ ಚಟುವಟಿಕೆಗಳೂ ಜರುಗಲಿವೆ.

ಎಲ್ಲಾ ವರ್ಷಕ್ಕಿಂತ ಭಿನ್ನವಾಗಿ, ಈ ವರ್ಷ ಒಂದು ವಾರ ಮೊದಲೇ ದುಬೈ ಶಾಪಿಂಗ್ ಫೆಸ್ಟಿವಲ್ ಆರಂಭವಾಗುವುದು. ಶಾಲಾ ಕಾಲೇಜುಗಳ ರಜಾದಿನಗಳ ಹೊಂದುವಂತೆ ಹಾಗೂ ಗರಿಷ್ಠ ಜನರು ಪಾಲ್ಗೊಳ್ಳಲು ಅನುಕೂಲವಾಗುವಂತೆ ಈ ಬದಲಾವಣೆ ಮಾಡಲಾಗಿದೆ

ಕೊರೋನಾ ಹಿನ್ನೆಲೆಯಲ್ಲಿ ಫೆಸ್ಟಿವಲಿನಲ್ಲಿ ಭಾಗವಹಿಸುವ ಎಲ್ಲಾ ಶಾಪಿಂಗ್ ಮಾಲುಗಳು ಕಟ್ಟುನಿಟ್ಟಿನ ಆರೋಗ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಈ ಕಾರ್ಯಕ್ರಮ ನಡೆಸಿಕೊಡಲಿವೆಯೆಂದು ಸಂಘಟಕರು ತಿಳಿಸಿರುತ್ತಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು