ಯಡಿಯೂರಪ್ಪನೇ ವಿಲನ್- ಸಚಿವ ಎಸ್.ಟಿ ಸೋಮಶೇಖರ್

st.shomashekar
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮೈಸೂರು(27-10-2020): ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಸಚಿವ ಎಸ್.ಟಿ ಸೋಮಶೇಖರ್ ವಿಲನ್ ಎಂದು ಹೇಳಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಮೈಸೂರಿನ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಟಿ ಸೋಮಶೇಖರ್, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವೆ ಹೀರೋ ವಿಲನ್ ಕಿತ್ತಾಟ ಎಂಬ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್.ಟಿ ಸೋಮಶೇಖರ್, ವಿಲನ್ ಯಾರೂ ಅಲ್ಲಾ, ಯಡಿಯೂರಪ್ಪಾನೇ ವಿಲನ್ ಎಂದು ಹೇಳಿದ್ದಾರೆ.

ತಕ್ಷಣ ಶಾಸಕ ರಾಮ್ ದಾಸ್ ಮಧ್ಯ ಪ್ರವೇಶಿಸಿ ವಿಲನ್ ಅಲ್ಲಾ ಸರ್ ಅದು ಹೀರೋ ಎಂದು ಸರಿಪಡಿಸಿದರು. ಕೂಡಲೇ ಎಚ್ಚೆತ್ತುಕೊಂಡ ಸಚಿವ ಸೋಮಶೇಖರ್, ಯಡಿಯೂರಪ್ಪ ಅವರು ಹೀರೋನೂ ಹೌದೂ ವಿಲನ್ನೂ ಹೌದು ಎಂದು ಹೇಳಿದ್ದಾರೆ. ಇದನ್ನು ಸೋಮಶೇಖರ್ ಉದ್ದೇಶಪೂರ್ವಕವಾಗಿ ಹೇಳಿದ್ದಾರೋ ಅಥವಾ ಬಾಯಿತಪ್ಪಿ ಹೇಳಿದ್ದಾರೋ ಎನ್ನುವುದು ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು