ಉಡುಪಿ (27-11-2020): ಮಂಗಳೂರಿನಲ್ಲಿ ಲಷ್ಕರ್ ಜಿಂದಾಬಾದ್ ಎಂದು ಬರೆದಿರುವ ವಿವಾದಿತ ಗೋಡೆ ಬರಹದ ಬಗ್ಗೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದು, ಉಗ್ರರು ಮಂಗಳೂರಿನವರೆಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಬೇಕು ಗೋಡೆ ಬರಹದ ಬಗ್ಗೆ ಶೀಘ್ರವಾಗಿ ತನಿಖೆ ನಡೆಯಬೇಕು ಎಂದು ಹೇಳಿದ್ದಾರೆ.
ಇನ್ನು ಲಷ್ಕರ್ ಬೆಂಬಲಿಸಿ ರಾಷ್ಟ್ರವಿರೋಧಿ ಬರಹ ಬರೆದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ನಳಿನ್ ಕುಮಾರ ಕಟೀಲ್, ವೇದವ್ಯಾಸ ಕಾಮತ್ ಕೂಡ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಇಂದು ಬೆಳಿಗ್ಗೆ ಅಪಾರ್ಟ್ ಮೆಂಟ್ ವೊಂದರಲ್ಲಿ ಉಗ್ರರನ್ನು ಬೆಂಬಲಿಸಿ ಗೋಡೆಯಲ್ಲಿ ಬರೆಯಲಾಗಿತ್ತು. ಈ ಬಗ್ಗೆ ಸ್ಥಳೀಯರಲ್ಲಿ ಆತಂಕವು ಸೃಷ್ಟಿಯಾಗಿತ್ತು. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆಯನ್ನು ಕೂಡ ನಡೆಸಿದ್ದರು.