ಶಿವಮೊಗ್ಗ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕೇಸರಿ ಧ್ವಜ ಹಾರಿಸಿದ್ದ ಧ್ವಂಜಸ್ತಂಭದಲ್ಲಿ ಇಂದು ಮುಂಜಾನೆ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು.
ಹಿಜಾಬ್ – ಕೇಸರಿ ಸಂಘರ್ಷ ನಡುವೆ ಮಂಗಳವಾರ ಧ್ವಂಜಸ್ತಂಭಕ್ಕೆ ಏರಿ ಕೇಸರಿ ಬಾವುಟ ಕಟ್ಟಲಾಗಿತ್ತು ಆದರೆ ಇಂದು ಅದೇ ಕಂಬಕ್ಕೆ ಎನ್ಎಸ್ ಯುಐ ಕಾರ್ಯಕರ್ತರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಏಕತೆಯ ಶಾಂತಿಯ ಮಂತ್ರ ಪಠಿಸಿದರು .
ಎನ್ಎಸ್ ಯುಐ ಕಾರ್ಯಕರ್ತರು ಹಿಜಾಬ್ – ಕೇಸರಿ ವಿಚಾರ ಬಿಟ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಬೇಕು, ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದ ವಿಧ್ಯಾರ್ಥಿ ಸಮೂಹಗಳಲ್ಲಿ ಮನವಿ ಮಾಡಿದರು.
