ಶಿರಸಿ(31/10/2020): ಶಿರಸಿ ನಗರಸಭೆಯ ಅಧಿಕಾರವನ್ನು ಬಿಜೆಪಿ ಪಾಲಾಗಿದೆ.
ನಗರ ಸಭೆಯ ಸಭಾಭವನದಲ್ಲಿ ಇಂದು ನಡೆದ ಚಯನಾವಣೆಯಲ್ಲಿ ಅಧ್ಯಕ್ಷರಾಗಿ 26ನೇ ವಾರ್ಡಿನ ಸದಸ್ಯ ಬಿಜೆಪಿಯ ಗಣಪತಿ ನಾಯ್ಕ, ಉಪಾಧ್ಯಕ್ಷರಾಗಿ 15ನೇ ವಾರ್ಡಿನ ಸದಸ್ಯೆ, ಬಿಜೆಪಿಯ ವೀಣಾ ಶೆಟ್ಟಿ ಗೆಲುವು ಸಾಧಿಸಿದರು.
ಅಧ್ಯಕ್ಷ ಹುದ್ದೆಗೆ ಕಾಂಗ್ರೆಸ್ಸಿನ ಪ್ರದೀಪ ಶೆಟ್ಟಿ, ಉಪಾಧ್ಯಕ್ಷ ಹುದ್ದೆಗೆ ಶಮೀನಾ ಬಾನು ನಾಮಪತ್ರ ಸಲ್ಲಿಸಿದ್ದರು.
ಒಟ್ಟು 31 ಸದಸ್ಯರ ಪೈಕಿ 28 ಸದಸ್ಯರು ಮತ ಚಲಾಯಿಸಿದ್ದು, ಮೂವರು ಪಕ್ಷೇತರ ಸದಸ್ಯರು ತಟಸ್ಥರಾಗಿ ಉಳಿದರು.