ಶಿವಮೊಗ್ಗ(25-01-2021): ಹುಣಸೋಡು ಗಣಿ ಪ್ರದೇಶದಲ್ಲಿ ಸ್ಪೋಟ ಪ್ರಕರಣದ ಬೆನ್ನಹತ್ತಿದ ಪೊಲೀಸರು ಮಹತ್ವದ ಮಾಹಿತಿಯನ್ನು ಕಲೆಹಾಕಿದ್ದಾರೆ. ಗಣಿ ಪ್ರದೇಶದಲ್ಲಿ ಅಕ್ರಮವಾಗಿ ಸ್ಪೋಟಕ ಸಂಗ್ರಹಿಸಿ ಅಲ್ಲಿಂದ ಸಪ್ಲೈ ಮಾಡಲಾಗುತ್ತಿದೆಯಾ ಎಂಬ ಬಗ್ಗೆ ಕೂಡ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
ಸಿಎಂ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿ ಇಂತಹದ್ದೊಂದು ವಿಧ್ವಂಸಕ ಚಟುವಟಿಕೆಗಳು ನಡೆಯುತ್ತಿದೆಯಾ ಎಂಬಂತಹ ಸಂಶಯ ವ್ಯಕ್ತವಾಗುತ್ತಿದೆ.
ಹುಣಸೋಡು ಗಣಿ ಪ್ರದೇಶದಲ್ಲಿ ನಡೆದಂತಹ ಸ್ಪೋಟದ ನಂತರ ಪ್ರಮುಖ ಆರೋಪಿ ಎಸ್ಕೇಪ್ ಆಗಿದ್ದಾನೆ. ಪ್ರವೀಣ್ ಎಂಬುವವನ ಮೂಲಕ ಕರಿಗೌಡ ಸ್ಪೋಟಕ ಸ್ಪಪ್ಲೈ ಮಾಡುತ್ತಿದ್ದ ಎನ್ನುವ ಬಗ್ಗೆ ಪೊಲೀಸರು ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನು ಕರಿಗೌಡ, ಪ್ರವೀಣ್ಗೆ 2 ಲಕ್ಷ ಹಣ ನೀಡಿದ್ದನಂತೆ. ಅಲ್ಲದೆ ಸ್ಫೋಟ ಸಂಭವಿಸಿದ ಜಾಗದಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಸ್ಫೋಟದ ತೀವ್ರತೆಗೆ 2000 ಮುಖಬೆಲೆ ನೋಟುಗಳು ಚೆಲ್ಲಾಪಿಲ್ಲಿಯಾಗಿದೆ. ಈ ಬಗ್ಗೆ ವಿಸ್ಕೃತ ತನಿಖೆ ನಡೆಯುತ್ತಿದೆ.