ಕೇರಳದಲ್ಲಿ ಶಿಗೆಲ್ಲೋಸಿಸ್ ವೈರಸ್ ಪತ್ತೆ| ಕೊರೊನಾ ಮಧ್ಯೆ ಭೀತಿ ಉಂಟುಮಾಡಿದ ಮಾರಣಾಂತಿಕ ವೈರಸ್…

Shigella
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೇರಳ(20-12-2020): ಕೊರೊನಾ ಹಾವಳಿ ಮಧ್ಯೆ ಕೇರಳದಲ್ಲಿ ಮತ್ತೊಂದು ಬ್ಯಾಕ್ಟೀರಿಯ ಕಾಣಿಸಿಕೊಂಡಿದ್ದು, ಶಂಕಿತ ಬಾಲಕ ಮೃತಪಟ್ಟಿದ್ದಾನೆ, 6ಮಂದಿಗೆ ಸೋಂಕು ದೃಢಪಟ್ಟಿದೆ. 26ಮಂದಿ ಶಂಕಿತ ಸೋಂಕಿತರಿದ್ದಾರೆ.

ಕರುಳಿನ ಸೋಂಕು ಅತಿಸಾರ, ವಾಂತಿ, ಜ್ವರ ಮತ್ತು ತೀವ್ರತರವಾದ ಸಂದರ್ಭಗಳಲ್ಲಿ ಸಾವು ಇವು ರೋಗದ ಲಕ್ಷಣವಾಗಿದೆ.

ಕೋಝಿಕ್ಕೋಡು ಕಾರ್ಪೊರೇಷನ್ ಮಿತಿಯಲ್ಲಿರುವ ಕೊಟ್ಟಪರಂಬು ವಾರ್ಡ್‌ನಲ್ಲಿ ಆರು ಜನರಲ್ಲಿ ಈ ರೋಗ ಪತ್ತೆಗಿದೆ. ಈ ರೋಗದಿಂದ ಸಾವಿನ ಯಾವುದೇ ದೃಢಪಟ್ಟ ಪ್ರಕರಣಗಳು ವರದಿಯಾಗಿಲ್ಲವಾದರೂ, ಇದೇ ರೀತಿಯ ರೋಗಲಕ್ಷಣಗಳನ್ನು ಹೊಂದಿರುವ 11 ವರ್ಷದ ಬಾಲಕ ಇತ್ತೀಚೆಗೆ ಮೃತಪಟ್ಟಿದ್ದಾನೆ.

ಕೋಝಿಕ್ಕೋಡ್ ನ ಜಿಲ್ಲಾ ವೈದ್ಯಕೀಯ ಅಧಿಕಾರಿ (ಡಿಎಂಒ) ಪ್ರಕಾರ, ಒಂದೇ ವಾರ್ಡ್‌ನ 26 ಜನರು ಇದೇ ರೀತಿಯ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಜಿಲ್ಲೆಯ ಆರೋಗ್ಯ ಅಧಿಕಾರಿಗಳು ಈ ಪ್ರದೇಶದ ಜನರಿಗೆ ಸೋಂಕು ಕುರಿತು ಮುನ್ನೆಚ್ಚರಿಕೆ ನಿರ್ದೇಶನ ನೀಡಿದ್ದಾರೆ.

ಅತಿಸಾರ ಮತ್ತು ಜ್ವರದ ಲಕ್ಷಣಗಳನ್ನು ಹೊಂದಿದ್ದ 11 ವರ್ಷದ ಬಾಲಕ ಶುಕ್ರವಾರ ಮೃತಪಟ್ಟಿದ್ದಾನೆ.  ಸಾವಿನ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡರು. ಬಾಲಕನ ಮನೆಯಲ್ಲಿರುವ ಇತರ ಕುಟುಂಬದ ಸದಸ್ಯರು ಕೂಡ ಇದೇ ರೀತಿಯ ಲಕ್ಷಣಗಳನ್ನು ಹೊಂದಿದ್ದಾರೆಂದು ಕಂಡುಬಂದಿದೆ. ಇದು ಶಿಗೆಲ್ಲೋಸಿಸ್ ಎಂದು ಪರೀಕ್ಷೆಗಳು ಬಹಿರಂಗಪಡಿಸಿದರೂ, ಬಾಲಕನ ರಕ್ತದ ಮಾದರಿಗಳಿಂದ ಬ್ಯಾಕ್ಟೀರಿಯಾವನ್ನು ಪ್ರತ್ಯೇಕಿಸಲು ಸಾಧ್ಯವಾಗಿಲ್ಲ ಎಂದು ಡಿಎಂಒ ಡಾ ವಿ ವಿ ಜಯಶ್ರೀ ತಿಳಿಸಿದ್ದಾರೆ.

ಶಿಗೆಲ್ಲಾ ಸೋಂಕು ಸಾಮಾನ್ಯವಾಗಿ ಬ್ಯಾಕ್ಟೀರಿಯ ಸೋಂಕಿನಲ್ಲಿ ಒಂದಾಗಿದೆ, ಇದು ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.

ಹೆಚ್ಚಿನ ವೈರಲ್ ಸೋಂಕುಗಳು ಮಕ್ಕಳಲ್ಲಿ ಅತಿಸಾರವನ್ನು ಉಂಟುಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ, ರೋಗಗಳು ತೀವ್ರವಾಗಿ ಸಣ್ಣ ಮಕ್ಕಳ ಸಾವಿಗೆ ಕಾರಣವಾಗುತ್ತವೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು