ದುಬೈ ವತಿಯಿಂದ ಜಗತ್ತಿನ ನಿರಾಶ್ರಿತ ವಿದ್ಯಾರ್ಥಿಗಳಿಗಾಗಿ ಡಿಜಿಟಲ್ ಸ್ಕೂಲ್ ಸ್ಥಾಪನೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ದುಬೈ(11-11-2020): ಪ್ರಪಂಚದಾದ್ಯಂತ ಇರುವ ನಿರಾಶ್ರಿತ ಮಕ್ಕಳಿಗಾಗಿ ಉತ್ಕೃಷ್ಟ ದರ್ಜೆಯ ಶಿಕ್ಷಣ ನೀಡುವ ಉದ್ದೇಶದಿಂದ ಡಿಜಿಟಲ್ ಶಾಲೆ ಸ್ಫಾಪನೆಯಾಗಲಿದೆ. ಈ ವಿಚಾರವನ್ನು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ರಾಶಿದ್ ಅಲ್ ಮಖ್ತೂಮ್ ಟ್ವಿಟರ್ ಮೂಲಕ ಘೋಷಣೆ ಮಾಡಿದ್ದಾರೆ.

ಮೊದಲು ಇಪ್ಪತ್ತು ಸಾವಿರ ವಿದ್ಯಾರ್ಥಿಗಳಿಂದ ಆರಂಭವಾಗಲಿದೆ. ಐದು ವರ್ಷಗಳೊಳಗೆ ಸುಮಾರು ಹತ್ತು ಲಕ್ಷ ವಿದ್ಯಾರ್ಥಿಗಳು ಒಳಗೊಳ್ಳುವಂತೆ ಮಾಡುವ ಗುರಿಯಿರಿಸಲಾಗಿದೆ. ಸಂಘರ್ಷ ಮತ್ತು ಆರ್ಥಿಕ ಅಡಚಣೆಗಳ ಕಾರಣದಿಂದ ಭಾರೀ ಸಂಖ್ಯೆಯ ಮಕ್ಕಳು ವರ್ಷಾನುಗಟ್ಟಲೆ ಶಿಕ್ಷಣದಿಂದ ವಂಚಿತರಾಗಿದ್ದಾರೆಂದು ಶೈಖ್ ತಿಳಿಸಿದ್ದಾರೆ.

ಈ ಡಿಜಿಟಲ್ ಶಾಲೆಯ ನಿಯಂತ್ರಣ ಮತ್ತು ನಿರ್ವಹಣೆಗಳನ್ನು ಅಂತರರಾಷ್ಟ್ರೀಯ ವಿದ್ಯಾಸಂಸ್ಥೆಗಳು ಮತ್ತು ದಕ್ಷ ಶೈಕ್ಷಣಿಕ ಕಾರ್ಯಕರ್ತರಿಗೆ ವಹಿಸಿಕೊಡಲಾಗುವುದೆಂದು ಮೂಲಗಳು ತಿಳಿಸಿವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು