ದೆಹಲಿ: ಶೀಘ್ರದಲ್ಲೇ ಈ ಏಳು ಬ್ಯಾಂಕುಗಳ ಪಾಸ್ಬುಕ್ ಮತ್ತು ಚೆಕ್ ಬುಕ್ ಅಸಿಂಧುವಾಗಲಿದೆ. ಈ ಬ್ಯಾಂಕುಗಳು ಈಗಾಗಲೇ ಬೇರೆ ಬೇರೆ ಬ್ಯಾಂಕುಗಳ ಜೊತೆಗೆ ವಿಲೀನವಾಗಿದೆ.
ಈ ಬ್ಯಾಂಕುಗಳಲ್ಲಿ ಖಾತೆಗಳನ್ನು ಹೊಂದಿರುವವರು ಆದಷ್ಟು ಬೇಗನೇ ಹೊಸ ಚೆಕ್ ಬುಕ್ಕುಗಳಿಗೆ ಅಪೇಕ್ಷೆ ಸಲ್ಲಿಸಬೇಕಿದೆ
ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಆಂಧ್ರ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ಕಾಮರ್ಸ್, ಯುನೈಟೆಡ್ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕುಗಳೇ ಈ ಬದಲಾವಣೆ ಒಳಗಾಗಲಿರುವ ಬ್ಯಾಂಕುಗಳು.
2019 ರ ಎಪ್ರಿಲ್ ಒಂದರಂದು ಈ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಆರಂಭವಾಗಿದ್ದು, ಈ ತಿಂಗಳ 31 ರಂದು ಸಂಪೂರ್ಣವಾಗಲಿದೆ. ಆ ಬಳಿಕ ಇವು ಸಂಪೂರ್ಣವಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ.
ದೇನಾ ಬ್ಯಾಂಕು ಮತ್ತು ವಿಜಯಾ ಬ್ಯಾಂಕುಗಳು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನವಾಗಿದೆ. ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕುಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೊತೆ ವಿಲೀನವಾಗಿದೆ. ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್ ಜೊತೆ ವಿಲೀನವಾಗಿದೆ. ಆಂಧ್ರ ಬ್ಯಾಂಕ್ ಮತ್ತು ಕಾರ್ಪೋರೇಶನ್ ಬ್ಯಾಂಕುಗಳ ಗ್ರಾಹಕರಿಗೆ ತಮ್ಮ ಹೊಸ ಐಎಫ್ಎಸ್ಇ ಕೋಡುಗಳನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವೈಬ್ಸೈಟಿನಲ್ಲಿ ತಿಳಿಯಬಹುದಾಗಿದೆ.
ಸಿಂಡಿಕೇಟ್ ಬ್ಯಾಂಕಿನ ವಿಚಾರದಲ್ಲಿ, ಅದರ ಚೆಕ್ ಬುಕ್ಕುಗಳು ಜೂನ್ ಮೂವತ್ತರ ವರೆಗೂ ಸಿಂಧುವಾಗಲಿದೆ ಎಂದುಕೆನರಾ ಬ್ಯಾಂಕ್ ತಿಳಿಸಿದೆ.