ಐದು ಶತಮಾನಗಳ ಕಾಲ ಕ್ರೂರ ದಬ್ಬಾಳಿಕೆ ನಡೆಸಿರುವುದಕ್ಕೆ ಮಾಯಾ ಜನರ ಕ್ಷಮೆ ಕೋರಿತು ಮೆಕ್ಸಿಕೋ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮೆಕ್ಸಿಕೋ ಸಿಟಿ: ಅತ್ಯಂತ ಸುಧೀರ್ಘ ಐದು ಶತಮಾನಗಳ ಕಾಲ ಕ್ರೂರ ದಬ್ಬಾಳಿಕೆಗೆ ಒಳಗಾದ ಮಾಯಾ ಆದಿವಾಸಿ ಜನರಿಗೆ ಇದೀಗ ತನ್ನನ್ನು ಶೋಷಣೆ ಮಾಡಿದವರಿಂದ ಕ್ಷಮೆ ಕೇಳಿಸಿಕೊಳ್ಳಬೇಕಾದ ಕಾಲ ಕೂಡಿ ಬಂದಿದೆ.

ಹೌದು ಮೊತ್ತಮೊದಲ ಬಾರಿಗೆ ಸ್ಪಾನಿಶ್ ಜನರಿಂದ ದಾಳಿಗೊಳಗಾದ ಬಳಿಕ ನಿರಂತರ ಐದು ಶತಮಾನಗಳಷ್ಟು ಕಾಲ ಮಾಯಾ ನಾಗರೀಕತೆಯ ಬುಡಕಟ್ಟು ಜನರು ಹೊರ ಪ್ರದೇಶಗಳಿಂದ ಬಂದ ಜನರಿಂದ ಕ್ರೂರವಾದ ದಬ್ಬಾಳಿಕೆ ಒಳಗಾಗಿದ್ದರು. ತಮ್ಮ ಜನರು ಶೋಷಣೆ ನಡೆಸಿರುವುದಕ್ಕಾಗಿ ಮೆಕ್ಸಿಕೋದ ಈಗಿನ ಅಧ್ಯಕ್ಷ ಆಂಡ್ರೋ ಮಾನುವಲ್ ಲೋಪೆಸ್ ಒಬ್ರಾಡೋರ್ ಮಾಯಾ ಜನರ ಕ್ಷಮೆ ಯಾಚಿಸಿದ್ದಾರೆ.

ಕ್ಷಮೆ ಯಾಚಿಸುವ ಸಂದರ್ಭದ ಚಿತ್ರ

ಮಾಯಾ ಜನರೆಂದರೆ ಉತ್ತರ ಅಮೇರಿಕಾದ ಆದಿವಾಸಿ ಜನರು. ಬುಡಕಟ್ಟು ಜನಾಂಗವಾದ ಮಾಯಾ ಜನರು ತಮ್ಮ ಅತಿ ಪುರಾತನ ಸಂಸ್ಕೃತಿಯನ್ನು ಈಗಲೂ ಪಾಲಿಸುತ್ತಾ, ಉತ್ತರ ಅಮೇರಿಕಾದ ಉತ್ತರ ಮೆಕ್ಸಿಕೋ, ಗ್ವಾಟಮಾಲ, ಎಲ್ಸಲ್ವಡರ್ ಮತ್ತು ಹೊಂಡುರಸುಗಳಲ್ಲಿ ವಾಸಿಸುತ್ತಿದ್ದಾರೆ.

ಹೊರಗಿನಿಂದ ಬಂದವರು ಜನರ ಮೇಲೆ ಆಕ್ರಮಣ ಮಾಡಿ, ಅವರ ವಾಸಸ್ಥಾನಗಳಿಂದ ಓಡಿಸಿ, ಅವರು ವಾಸಿಸುವ ಪ್ರದೇಶಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಅಲ್ಲೇ ದೇಶವನ್ನೂ ಕಟ್ಟಿ, ಮಾಯಾ ಜನರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ನೋಡಿಕೊಂಡರು.

1847 – 1901 ಹೆಚ್ಚು ಕಡಿಮೆ ಐವತ್ತು ವರ್ಷಗಳ ಕಾಲಾವಧಿಯಲ್ಲಿ ನಡೆದ ಕೋಮು ಗಲಭೆಗಳಲ್ಲಿ ಮಾತ್ರ ಎರಡೂವರೆ ಲಕ್ಷ ಮಾಯಾ ಜನರು ಕೊಲೆಗೀಡಾಗಿದ್ದಾರೆ. ಇದು ಅಧಿಕೃತ ದಾಖಲೆಗಳು ಸೂಚಿಸುವ ಲೆಕ್ಕಾಚಾರ ಅಷ್ಟೇ. ಇನ್ನು ಅತ್ಯಾಚಾರ, ಸೊತ್ತು ನಾಶಗಳು ದೈಹಿಕ ಹಲ್ಲೆ ಇತ್ಯಾದಿಗಳೂ ಅಪರಿಮಿತವಾಗಿ ನಡೆದಿವೆ.

ಮೂರು ಶತಮಾನಗಳ ಕಾಲ ಮಾಯಾ ಪ್ರದೇಶಗಳಲ್ಲಿ ವಸಾಹತು ಸ್ಥಾಪಿಸಿದ ಸಮಯದಲ್ಲೂ, ಇನ್ನೆರಡು ಶತಮಾನಗಳ ಕಾಲ ಸ್ವತಂತ್ರ ಮೆಕ್ಸಿಕೋ ಅಸ್ತಿತ್ವದಲ್ಲಿದ್ದ ಸಮಯದಲ್ಲೂ ವ್ಯಕ್ತಿಗಳೂ, ಸ್ವದೇಶಿಗಳೂ, ವಿದೇಶಿಗಳೂ ಸೇರಿ ಮಾಯಾ ಜನರ ಮೇಲೆ ನಡೆಸಿದ ಭೀಕರ ದಬ್ಬಾಳಿಕೆಗಾಗಿ ಪ್ರಾಮಾಣಿಕವಾಗಿ ನಾವು ಕ್ಷಮೆ ಯಾಚಿಸು ತ್ತಿದ್ದೇವೆ.” ಎನ್ನುತ್ತಾ ಮೆಕ್ಸಿಕೋದ ಅಧ್ಯಕ್ಷ ಆಂಡ್ರೋ ಮಾನುವಲ್ ಲೋಪೆಸ್ ಒಬ್ರಾಡೋರ್ ಚಾರಿತ್ರಿಕ ಕ್ಷಮೆ ಯಾಚಿಸಿದ್ದಾರೆ.

ಮೆಕ್ಸಿಕೋದ ಒಂದು ರಾಜ್ಯವಾದ ಕ್ವಾಂಟನಾ ರೂನಲ್ಲಿ, ಗ್ವಾಟಮಾಲದ ಅಧ್ಯಕ್ಷ ಅಲೆಜಂಡ್ರೋ ಗಿಯಾಮಟ್ಟೈ ಅವರ ಸಮ್ಮುಖದಲ್ಲಿ ಕ್ಷಮಾಪನೆ ಕೋರಿದ್ದಾರೆ. ಸಂದರ್ಭದಲ್ಲಿ ಅಲೆಜಂಡ್ರೋ ಗಿಯಾಮಟ್ಟೈ ಮಾತನಾಡಿ, ಮಾಯಾ ಜನರು ಈಗಲೂ ನಿರಂತರ ಕಡೆಗಣನೆಗೂ, ಹಿಂಸಾಚಾರಕ್ಕೂ ಒಳಗಾಗುತ್ತಿದ್ದಾರೆ ಎಂದು ಹೇಳಿದರು. ಮೆಕ್ಸಿಕೋ ಗೃಹ ಸಚಿವಾಲಯದ ಮುಖ್ಯಸ್ಥೆ ಓಲ್ಗಾ ಸಂಚೆಸ್ ಕೂಡಾ ಹಾಜರಿದ್ದು, ಅವರೂ ಮಾಯನ್ನರ ಕ್ಷಮೆ ಯಾಚಿಸಿದ್ದಾರೆ.

ತನ್ನ ರಾಜ್ಯವಾದ ತಬಸ್ಕೋದಲ್ಲಿ ಮಾಯಾ ನಾಗರಿಕರ ಹಕ್ಕುಗಳ ಕುರಿತು ಧ್ವನಿಯೆತ್ತುತ್ತಾ ರಾಜಕೀಯ ಅಸ್ತಿತ್ವವನ್ನು ಗಳಿಸಿಕೊಂಡ ಮಾನುವಲ್, ಈಗಲೂ ಮಯಾ ಜನರ ಬಗೆಗೆ ಅನುಕಂಪವನ್ನು ಹೊಂದಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತನ್ನ ರಾಜಕೀಯ ಬಲವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲು ಮೆಕ್ಸಿಕೋ ಅಧ್ಯಕ್ಷರು ರೀತಿಯ ಕ್ಷಮೆ ಕೋರುವ ನಡೆಗೆ ಮುಂದಾಗಿದ್ದಾರೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು