ತಮಿಳುನಾಡು(09-02-2021):ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಎಐಎಡಿಎಂಕೆ ಸೋಮವಾರ ಏಳು ಮಂದಿ ಪದಾಧಿಕಾರಿಗಳನ್ನು ಪಕ್ಷದಿಂದ ಹೊರಹಾಕಿದೆ.
ವಜಾಗೊಳಿಸಿದವರಲ್ಲಿ ತಿರುವಳ್ಳೂರು ಜಿಲ್ಲೆಯ ಎಐಎಡಿಎಂಕೆ ಉಪ ಕಾರ್ಯದರ್ಶಿ ದಕ್ಷಿನಮೂರ್ತಿ ಅವರು ಸೇರಿದ್ದಾರೆ. ಅವರು ತಮಿಳುನಾಡಿಗೆ ಮರಳಲು ವಿ.ಕೆ.ಶಶಿಕಲಾ ಅವರಿಗೆ ತಮ್ಮ ಕಾರನ್ನು ನೀಡಿದ್ದರು. ಕಾರಿನಲ್ಲಿ ಆಡಳಿತರೂಢ ಎಐಎಡಿಎಂಕೆ ಧ್ವಜ ಇತ್ತು.
ಉಚ್ಚಾಟಿತ ಎಐಎಡಿಎಂಕೆ ಮುಖಂಡೆ ಶಶಿಕಲಾ ಅವರು ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಬೆಂಗಳೂರಿನಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಪೂರೈಸಿದ ಕೆಲ ದಿನಗಳ ನಂತರ ನಿನ್ನೆ ತಮಿಳುನಾಡಿಗೆ ಮರಳಿದರು. ಪಕ್ಷದ ಧ್ವಜವನ್ನು ಬಳಸದಂತೆ ಪೊಲೀಸರು ತಡೆಯುವುದನ್ನು ವಿಫಲಗೊಳಿಸಲು ಶಶಿಕಲಾ ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸುವಾಗ, ಎಐಎಡಿಎಂಕೆ ಸದಸ್ಯ ದಕ್ಷಿನಮೂರ್ತಿ ಗೆ ಸೇರಿದ ಕಾರುಗಳನ್ನು ಬಳಸಿದ್ದಾರೆ ಎಂದು ವರದಿಯಾಗಿದೆ.
ಶಶಿಕಲಾ ಎಐಎಡಿಎಂಕೆ ಧ್ವಜವನ್ನು ಬಳಸುವ ಬಗ್ಗೆ ಈ ಹಿಂದೆ ಎಐಎಡಿಎಂಕೆ ನಾಯಕರು ದೂರು ನೀಡಿದ್ದರು. ಆದರೆ ಶಶಿಕಲಾ ಹಠದಿಂದ ಪಕ್ಷದ ಧ್ವಜವನ್ನು ಬಳಸಿದ್ದಾರೆ. ಜೈಲಿಗೆ ಹೋಗುವ ಮೊದಲು ಎಐಎಡಿಎಂಕೆ ಅಧ್ಯಕ್ಷೆಯಾಗಿದ್ದ ಶಶಿಕಲಾ ಅವರನ್ನು ಪಣ್ಣೀರ್ ಸೆಲ್ವಂ ಉಚ್ಚಾಟನೆ ಮಾಡಿದ್ದರು.