ಕೋಝಿಕ್ಕೋಡ್(24-10-2020): ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನ ಕೋಝಿಕ್ಕೊಡ್ ಶಾಸಕ ಕೆಎಂ ಶಾಜಿಗೆ ಕೋಝಿಕೋಡ್ ಕಾರ್ಪೊರೇಷನ್ ನೋಟಿಸ್ ನೀಡಿದ್ದು, ಅವರ ನಿವಾಸವನ್ನು ನೆಲಸಮಗೊಳಿಸುವಂತೆ ಆದೇಶಿಸಿದೆ.
ಶಾಜಿಯ ಮನೆಯನ್ನು ನಿರ್ಮಿಸುವಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಮನೆಯನ್ನು ಉರುಲಿಸಲು ಆದೇಶ ಹೊರಡಿಸಲಾಗಿದೆ. ಅಧಿಕಾರಿಗಳು ಮನೆಯ ವಿಸ್ತೀರ್ಣವನ್ನು ಅಳೆಯುತ್ತಾರೆ ಮತ್ತು ಮನೆ ನಿಗದಿಪಡಿಸಿದ ಪ್ರದೇಶವನ್ನು ಮೀರಿದೆ ಎಂದು ದಾಖಲಿಸಿದ್ದಾರೆ.
200 ಚದರ ಅಡಿ ಭೂಮಿಯಲ್ಲಿ ಮನೆ ನಿರ್ಮಿಸಲು ಶಾಜಿ ಕೋಝಿಕ್ಕೋಡ್ ಕಾರ್ಪೊರೇಶನ್ನಿಂದ ಅನುಮತಿ ಕೋರಿದ್ದರು. ಆದರೆ, ಈಗ ಈ ಮನೆಯನ್ನು 550 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. 2016 ರಲ್ಲಿ ಈ ಯೋಜನೆ ಪೂರ್ಣಗೊಂಡಿದ್ದರೂ, ನಿರ್ಮಾಣವನ್ನು ಕ್ರಮಬದ್ಧಗೊಳಿಸುವಂತೆ ನಿಗಮವು ನೀಡಿರುವ ನೋಟಿಸ್ಗೆ ಸ್ಪಂದಿಸದ ಕಾರಣ ಮನೆಗೆ ಸಂಖ್ಯೆ ನೀಡಿಲ್ಲ. ಮನೆಯ ಮೂರನೇ ಮಹಡಿಯ ಹೆಚ್ಚುವರಿ ನಿರ್ಮಾಣವು ನಿಯಮದ ಉಲ್ಲಂಘನೆಯಾಗಿದೆ ಎಂದು ನಿಗಮ ಹೇಳಿದೆ.
ಶಾಜಿಯ ನಿವಾಸದ ಮೌಲ್ಯವನ್ನು ನಿರ್ಧರಿಸಬೇಕೆಂದು ಜಾರಿ ನಿರ್ದೇಶನಾಲಯದ ಆದೇಶ ಮಾಡಿದ ಕಾರಣ ಕಾರ್ಪೊರೇಶನ್ನ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಅವರ ತಂಡವು ಮಲೂರುಕುನ್ನು ಬಳಿ ಇರುವ ಶಾಜಿ ಮನೆಯನ್ನು ಪರಿಶೀಲನೆ ನಡೆಸಿದೆ.