“ಶಹಾದತ್ ಈಸ್ ಅವರ್ ಗೋಲ್” ಸಂಘಟನೆಯ ಕಾರ್ಯಕರ್ತನ ಬಂಧಿಸಿದ ಎನ್ ಐಎ

nia
Share on facebook
Share on twitter
Share on linkedin
Share on whatsapp
Share on telegram
Share on email
Share on print

ಚೆನ್ನೈ (22-01 -2021): “ಶಹಾದತ್ ಈಸ್ ಅವರ್ ಗೋಲ್” ಸಂಘಟನೆಯ ಸಕ್ರಿಯ ಸದಸ್ಯನನ್ನು ಎನ್‌ಐಎ  ಅಧಿಕಾರಿಗಳು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.

25 ವರ್ಷದ ಮೊಹಮ್ಮದ್ ರಶೀದ್ ಎಂಬಾತನನ್ನು ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಬಳಿಕ, ಚೆನ್ನೈನ ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ಆತನನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಬಂಧಿತನಿಂದ  ಗ್ಯಾಂಗ್‌ಗೆ ಸಂಬಂಧಿಸಿದ ಕರಪತ್ರಗಳು, ಕತ್ತಿ ಸೇರಿದಂತೆ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಅಧಿಕಾರಿ ತಿಳಿಸಿದ್ದಾರೆ.

2018ರಲ್ಲಿ ಇದೇ ಗ್ಯಾಂಗ್ ನ ಮೊಹಮ್ಮದ್ ರಿಫಾಸ್, ಮುಪಾರಿಶ್ ಅಹಮದ್ ಮತ್ತು ಅಬುಬಕ್ಕರ್ ಸಿದ್ದಿಕ್ ಅವರನ್ನು ಪೊಲೀಸರು ಬಂಧಿಸಿ ತನಿಖೆಯನ್ನು ನಡೆಸಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು