“ಪ್ರೆಸಿಡೆಂಟ್ ಅಂಕಲ್, ನನ್ನ ತಾಯಿಗೆ ಕ್ಷಮಿಸಿ” ಗಲ್ಲು ಶಿಕ್ಷೆಗೆ ಗುರಿಯಾದ ಶಬ್ನಂ ಪುತ್ರನಿಂದ ತಾಯಿಯನ್ನು ಬದುಕಿಸುವ ಪ್ರಯತ್ನ!

sabnam son
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(20-02-2021): ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಶಬ್ನಮ್ ಅಲಿಯ 12 ವರ್ಷದ ಮಗ ಮೊಹಮ್ಮದ್ ತಾಜ್, ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರಿಗೆ ಮನವಿಯನ್ನು ಮಾಡಿದ್ದು, ಪ್ರೆಸಿಡೆಂಟ್ ಅಂಕಲ್ ಪ್ಲೀಸ್ ಪೊರ್ ಗೀವ್ ಮೈ ಮದರ್( ಅಧ್ಯಕ್ಷ ಮಾವ ನನ್ನ ತಾಯಿಗೆ ಕ್ಷಮಿಸಿ) ಎಂದು ಮನವಿಯನ್ನು ಮಾಡಿದ್ದಾರೆ.

ಅಮ್ರೋಹಾ ಜಿಲ್ಲೆಯಲ್ಲಿ  ಪ್ರಿಯಕರನ ಜೊತೆಗೆ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ ಕುಟುಂಬದ 7 ಸದಸ್ಯರನ್ನು ಕೊಂದು ಹಾಕಿದ ಶಬ್ನಮ್ಗೆ ಮರಣದಂಡನೆ ವಿಧಿಸಲಾಗಿತ್ತು. ಆ ಬಳಿಕದ ಕ್ಷಮಾಪನಾ ಮನವಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದರು. ಪ್ರಸ್ತುತ ಮಹಿಳೆಯನ್ನು ರಾಂಪುರ್ ಜೈಲಿನಲ್ಲಿ ಇರಿಸಲಾಗಿದೆ.

ನಾನು ನನ್ನ ತಾಯಿಯನ್ನು ಪ್ರೀತಿಸುತ್ತೇನೆ. ಅಧ್ಯಕ್ಷ ಅಂಕಲ್ ನನಗೆ ಒಂದೇ ಒಂದು ಬೇಡಿಕೆ ಇದೆ, ನನ್ನ ತಾಯಿಯನ್ನು ಗಲ್ಲಿಗೇರಿಸಲು ಬಿಡುವುದಿಲ್ಲ ಎಂದು ಮೊಹಮ್ಮದ್ ತಾಜ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.  ಅಧ್ಯಕ್ಷ ಅಂಕಲ್ ಜಿ, ದಯವಿಟ್ಟು ನನ್ನ ತಾಯಿ ಶಬ್ನಮ್ ಅವರನ್ನು ಕ್ಷಮಿಸಿ ಎಂದು ತಾಜ್ ಸ್ಲೇಟ್ ನಲ್ಲಿ ಬರೆದು ಮನವಿಯನ್ನು ಮಾಡಿದ್ದಾರೆ.

12 ವರ್ಷದ ಶಬ್ನಂ ಪುತ್ರ ತಾಜ್ ತನ್ನ ಸಾಕು ಪೋಷಕ ಉಸ್ಮಾನ್ ಸೈಫಿಯೊಂದಿಗೆ  ಸಧ್ಯ ವಾಸಿಸುತ್ತಿದ್ದಾನೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು