ಶಬರಿಮಲೆ ಪ್ರವೇಶಿಸಿದ ಮೊದಲ ಮಹಿಳೆ ಬಿಂದು ಅಮ್ಮಿನಿ ಮೇಲೆ ಹಲ್ಲೆ: ಆರೋಪಿ ಅಂದರ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜನವರಿ 5 ರಂದು ಬುಧವಾರ ಸಾಮಾಜಿಕ ಹೋರಾಟಗಾರ್ತಿ ಬಿಂದು ಅಮ್ಮಿನಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಮೋಹನ್‌ದಾಸ್ ಎಂಬುವವರನ್ನು ಬಂಧಿಸಲಾಗಿದೆ. ಶಬರಿಮಲೆಗೆ ಪ್ರವೇಶ ಮಾಡಿದ್ದ 10 ರಿಂದ 50 ವರ್ಷದೊಳಗಿನ ಮೊದಲ ಮಹಿಳೆಯರಲ್ಲಿ ಬಿಂದು ಅಮ್ಮಿನಿ ಕೂಡ ಒಬ್ಬರು.

ಆರೋಪಿ ಕೋಝಿಕ್ಕೋಡ್‌ನ ಥೋಡಿಯಿಲ್‌ನವರು. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಗುರುವಾರ ಕೋಝಿಕೋಡ್ ಜಿಲ್ಲೆಯ ವೆಲ್ಲಾಯಿಲ್ ಪೊಲೀಸರು ತಿಳಿಸಿದ್ದಾರೆ.

ಜನವರಿ 5 ರಂದು ಕೋಝಿಕ್ಕೋಡ್‌ನಲ್ಲಿ ಬಿಂಧು ಅಮ್ಮಿನಿ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದರು. ಈ ಹಲ್ಲೆಯ ವೀಡಿಯೊಗಳು ಮತ್ತು ಚಿತ್ರಗಳು ಸಾಕಷ್ಟು ವೈರಲ್ ಆಗಿದ್ದು, ದೃಶ್ಯದಲ್ಲಿ ಆರೋಪಿ ಬಿಂದು ಅವರ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಲು ಪ್ರಯತ್ನಿಸುತ್ತಿರುವುದು ಕಾಣಬಹುದಾಗಿದೆ.

ಹೋರಾಟಗಾರ್ತಿ ಬಿಂದು ಅವರ ಮೇಲೆ ದಾಳಿಯಾಗುತ್ತಿರುವುದು ಇದು ಮೊದಲೇನಲ್ಲ. ಕಳೆದ ಡಿಸೆಂಬರ್‌ನಲ್ಲಿಯೂ ಆಕೆಗೆ ಆಟೋರಿಕ್ಷಾ ಡಿಕ್ಕಿ ಹೊಡೆದು ತಲೆಗೆ ಗಾಯವಾಗಿತ್ತು. ಬಳಿಕ ಬಿಂದು ಕೊಯಿಲಾಂಡಿ ಪೊಲೀಸರಿಗೆ ದೂರು ನೀಡಿ, ತಾನು ಶಬರಿಮಲೆ ಅಭಿಯಾನ ನಡೆಸುತ್ತಿದ್ದ ಕಾರಣಕ್ಕೆ ದಾಳಿ ಮಾಡಲಾಗಿದೆ ಎಂದು ಆರೋಪಿಸಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು