ಚೆನ್ನೈ(12-02-2020): 14 ವರ್ಷದ ಬಾಲಕನಿಗೆ ಅಪರಿಚಿತ ವ್ಯಕ್ತಿಯೊಂದಿಗೆ ಸೆಕ್ಸ್ ಮಾಡುವಂತೆ ಮಂಗಳಮುಖಿಯರಿಬ್ಬರು ಒತ್ತಾಯಿಸಿ ಪೊಲೀಸರ ಅಥಿತಿಯಾಗಿದ್ದಾರೆ.
ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಅಪರ್ಣ(32) ಹಾಗೂ ಸತ್ಯ(30) ಬಂಧಿತರು. ಇಬ್ಬರೂ ಕೂತೂರು ಮೂಲದವರಾಗಿದ್ದಾರೆ.
ದಿಂಡಿಗಲ್ನ ಬಸ್ ನಿಲ್ದಾಣದಲ್ಲಿ ಲೈಂಗಿಕ ಅಲ್ಪಸಂಖ್ಯಾತ ಬಾಲಕ ಕೆಲ ದಿನಗಳ ಹಿಂದೆ ಅಪರ್ಣ ಹಾಗೂ ಸತ್ಯ ಅವರನ್ನು ಭೇಟಿಯಾಗಿದ್ದ. ಅವರ ಜೊತೆ ಮಾತನಾಡಿ ಫೋನ್ ಬಂಬರ್ ಕೂಡ ಕೊಟ್ಟಿದ್ದ. ಬಳಿಕ ಇಬ್ಬರೂ ಕರೆ ಮಾಡಿ ತಿರುಚ್ಚಿಗೆ ಬರಲು ಬಾಲಕನಿಗೆ ಹೇಳಿದ್ದಾರೆ. ಅಲ್ಲದೆ ಲೈಂಗಿಕತೆ ಶಸ್ತ್ರಚಿಕಿತ್ಸೆ ಮಾಡಿಸಲು ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬಾಲಕ ನ. 25ರಂದು ತಿರುಚ್ಚಿಗೆ ತೆರಳಿದ್ದು, ಈ ವೇಳೆ ಅಪರ್ಣ ಹಾಗೂ ಸತ್ಯ ಬಾಲಕನಿಗೆ ಮದ್ಯ ಕುಡಿಸಿ ಹಣಕ್ಕಾಗಿ ಅಪರಿಚಿತನೊಂದಿಗೆ ಸೆಕ್ಸ್ ಮಾಡುವಂತೆ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಬೇಸರಗೊಂಡ ಬಾಲಕ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾನೆ.