ಹಾಲೆಂಡಿನಲ್ಲಿ ಸೌದಿ ರಾಯಭಾರಿ ಕಛೇರಿ ಮೇಲೆ ದಾಳಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಮ್ಸ್ಟರ್ಡಮ್(12-11-2020): ಹಾಲೆಂಡಿನಲ್ಲಿರುವ ಸೌದಿ ಅರೇಬಿಯಾದ ರಾಯಭಾರಿ ಕಛೇರಿ ಮೇಲೆ ಅಜ್ಞಾತ ಬಂದೂಕುಧಾರಿಯಿಂದ ಗುಂಡಿನ ದಾಳಿ ನಡೆದಿದೆ. ಹಲವು ಸುತ್ತುಗಳ ಗುಂಡಿನ ದಾಳಿ ನಡೆದಿದೆ. ನಲ್ವತ್ತು ವರ್ಷ ವಯಸ್ಸಿನ ದುಷ್ಕರ್ಮಿಯನ್ನು ಬಂಧಿಸಿದ್ದಾಗಿ ಡಚ್ ಪೋಲೀಸರ ಹೇಳಿಕೊಂಡಿದ್ದಾರೆ.

ಸೌದಿ ಅರೇಬಿಯಾದಲ್ಲಿ ಫ್ರೆಂಚ್ ರಾಜತಾಂತ್ರಿಕರ ವಿರುದ್ಧ ನಡೆದ ದಾಳಿಯ ಮರುದಿನವೇ ಹಾಲೆಂಡಿನ ಈ ಆಕ್ರಮಣ ನಡೆದಿರುವುದು ಗಮನಾರ್ಹ. ಪ್ರವಾದಿಯವರ ಕಾರ್ಟೂನ್ ರಚನೆಯ ಬಳಿಕ ಉಂಟಾದ ವಿವಾದಗಳ ಬಳಿಕ ಫ್ರೆಂಚ್ ರಾಯಭಾರಿ ಕಛೇರಿ ವಿರುದ್ಧ ದಾಳಿ ನಡೆದಿತ್ತು. ಗ್ರಾನೈಟ್ ಸ್ಫೋಟಸಿ ನಡೆಸಿದ ಈ ದಾಳಿಯಲ್ಲಿ ಹಲವು ಮಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಗಾಯಾಳುಗಳನ್ನು ಜಿದ್ದಾ ಗವರ್ನರ್ ಸಂದರ್ಶಿಸಿದ್ದಾರೆ. ಮತ್ತು ಸೌದಿ, ಫ್ರಂಚ್ ಸೇರಿದಂತೆ ಹಲವು ದೇಶಗಳು ಇದನ್ನು ಖಂಡಿಸಿವೆ. ಪೋಲೀಸರ ವಶದಲ್ಲಿರುವ ಆರೋಪಿಗಳನ್ನು ನಿರಂತರ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಹೇಗ್ ಮತ್ತು ಜಿದ್ದಾಗಳಲ್ಲಿ ನಡೆದ ದಾಳಿ ಬಳಿಕ ಫ್ರಂಚ್ ಮತ್ತು ಸೌದಿ ಅರೇಬಿಯಾ ದೇಶಗಳು ವಿದೇಶಗಳಲ್ಲಿರುವ ತಮ್ಮ ಪ್ರಜೆಗಳಿಗೆ ಎಚ್ಚರದಲ್ಲಿರುವಂತೆ ಸೂಚಿಸಿವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು