ಸೆನೆಗಲ್ (31-10-2020): ಹಡಗು ದುರಂತ ಸಂಭವಿಸಿ 140 ಕ್ಕೂ ಅಧಿಕ ಮಂದಿ ಜಲಸಮಾಧಿಯಾದ ದುರಂತ ಘಟನೆ ಸೆನೆಗಲ್ ಕರಾವಳಿಯಲ್ಲಿ ನಡೆದಿದೆ.
ಸೆನೆಗಲ್ ರಾಜಧಾನಿ ಡಾಕರ್ ನಿಂದ ದಕ್ಷಿಣಕ್ಕೆ 100 ಕಿಲೋಮೀಟರ್ ದೂರದ ಎಂಬೋರ್ ಎಂಬ ಮೀನುಗಾರಿಕೆ ಪಟ್ಟಣದಿಂದ ಹಡಗು ಹೊರಟ ಕೆಲವೇ ಗಂಟೆಗಳಲ್ಲಿ ಮುಳುಗಡೆಯಾಗಿದೆ
ಹಡಗಿನಲ್ಲಿ 200 ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಕನಿಷ್ಠ 140ಕ್ಕೂ ಅಧಿಕ ಮಂದಿ ಮುಳುಗಿದ್ದಾರೆ. ಸೆನೆಗಲ್ ಮತ್ತು ಸ್ಪ್ಯಾನಿಶ್ ನೌಕಾಪಡೆಗಳು, ಸ್ಥಳೀಯ ಮೀನುಗಾರರು ತಕ್ಷಣವೇ ದೋಣಿಗಳ ಮೂಲಕ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ.