ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ

Share on facebook
Share on twitter
Share on linkedin
Share on whatsapp
Share on telegram
Share on email
Share on print

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಎಪ್ರಿಲ್/ಮೇ ತಿಂಗಳಿನಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.
ದಿನಾಂಕ 08-02-2022 ರಂದು 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿತ್ತು.

ಆದರೆ ದಿನಾಂಕ 21-4-2022ರಂದು ನಡೆಯಬೇಕಿದ್ದ ಭಾಷಾ ವಿಷಯಗಳಲ್ಲಿ ಉರ್ದು ಮತ್ತು ಅರೇಬಿಕ್ ವಿಷಯಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿದ್ದು, ಒಂದೇ ವೇಳೆಯಲ್ಲಿ ಒಂದೇ ದಿನ ಎರಡು ವಿಷಯಗಳನ್ನು ಬರೆಯಲು ಸಾಧ್ಯವಾಗುವುದಿಲ್ಲವಾದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅರೇಬಿಕ್ ವಿಷಯದ ಪರೀಕ್ಷೆಯನ್ನು ಮಾತ್ರ ದಿನಾಂಕ 29-04-2022ಕ್ಕೆ ನಿಗದಿಪಡಿಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.
ಪರಿಷ್ಕೃತ ವೇಳಾಪಟ್ಟಿ ಹೀಗಿದೆ
ಎಪ್ರಿಲ್ 16, 2022 ಗಣಿತ, ಶಿಕ್ಷಣ, ಬೇಸಿಕ್ ಗಣಿತ,
ಎಪ್ರಿಲ್ 18, 2022 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಎಪ್ರಿಲ್ 19, 2022 ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ ನೆಸ್
ಎಪ್ರಿಲ್ 20, 2022 ಇತಿಹಾಸ ಮತ್ತು ಭೌತಶಾಸ್ತ್ರ,
ಎಪ್ರಿಲ್ 21, 2022 ತಮಿಳು, ಮರಾಠಿ, ತೆಲಗು, ಮಲಯಾಳಮ್ ಉರ್ದು, ಸಂಸ್ಕೃತ, ಫ್ರೆಂಚ್,
ಎಪ್ರಿಲ್ 22, 2022 ಲಾಜಿಕ್, ಬಿಜಿನೆಸ್ ಸ್ಟಡೀಸ್,
ಎಪ್ರಿಲ್ 23, 2022 ಕರ್ನಾಟಿಕ್ ಸಂಗೀತ, ಹಿಂದೂಸ್ತಾನಿ ಸಂಗೀತ, ಸೈಕಾಲಜಿ, ರಸಾಯನಶಾಸ್ತ್ರ,
ಎಪ್ರಿಲ್ 25, 2022 ಅರ್ಥಶಾಸ್ತ್ರ,
ಎಪ್ರಿಲ್ 26, 2022 ಹಿಂದಿ,
ಎಪ್ರಿಲ್ 28, 2022 ಕನ್ನಡ
ಎಪ್ರಿಲ್ 29, 2022 ಅರೇಬಿಕ್
ಎಪ್ರಿಲ್ 30, 2022 ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್,
ಮೇ 02, 2022 ಭೂಗೋಳ ಶಾಸ್ತ್ರ, ಜೀವಶಾಸ್ತ್ರ,
ಮೇ 04, 2022 ಇಂಗ್ಲಿಷ್,
ಮೇ 06, 2022 ಲೆಕ್ಕ ಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ, ಕನ್ನಡ 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು