ಪುತ್ತೂರು; ಮೌಲಾನ ಆಝಾದ್ ಶಾಲೆಯ ನಿರ್ಮಾಣಕ್ಕೆ ಸಂಘಪರಿವಾರದಿಂದ ಅಡ್ಡಿ: ಎಸ್‌ಡಿಪಿಐ ಆರೋಪ

sdpi
Share on facebook
Share on twitter
Share on linkedin
Share on whatsapp
Share on telegram
Share on email
Share on print
ಪುತ್ತೂರು(12/10/2020): ನಗರದ ಕಾಡು ಮನೆ ಮತ್ತು ಬೆದ್ರಾಳ ಇದರ ಮದ್ಯೆ 2.50 ಕೋಟಿ ವೆಚ್ಚದಲ್ಲಿ ಅಲ್ಪಸಂಖ್ಯಾತರಿಗೆ ಶಾಲೆಯನ್ನು ನಿರ್ಮಿಸುವ ಸರಕಾರದ ಕಾರ್ಯಕ್ರಮಕ್ಕೆ ಸಂಘಪರಿವಾರ  ಅಡ್ಡಿಪಡಿಸುತ್ತಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ  ಅಧ್ಯಕ್ಷರಾದ ಸಿದ್ದೀಕ್ ಕೆ.ಎ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಪುತ್ತೂರು ನಗರ ಸಭಾ ವ್ಯಾಪ್ತಿಯ ಸರ್ವೆ ನಂಬರ್ 51/1A (P1) ರಲ್ಲಿ 0.50 ಎಕ್ರೆ ಜಾಗದಲ್ಲಿ ಮೌಲಾನ ಅಝಾದ್ ರವರ ಹೆಸರಿನಲ್ಲಿ ಸಾಂಸ್ಕೃತಿಕ ಕೇಂದ್ರ ಮತ್ತು ಅರೇಬಿಕ್ ಸ್ಕೂಲನ್ನು ಕಟ್ಟಲು ಸ್ಥಳೀಯ ಯೋಜನಾ ಪ್ರಾಧಿಕಾರ ಶಿಫಾರಸ್ಸು ಮಾಡಿತ್ತು. ಅಕ್ಟೋಬರ್ 3 ರಂದು ಕಟ್ಟಡದ ಶಿಲನ್ಯಾಸ ಕಾರ್ಯಕ್ರಮ ನೆರವಾಗಬೇಕಾಗಿತ್ತು. ಆದರೆ ಸಂಘಪರಿವಾರ ಅನುಮತಿಯನ್ನು ರದ್ದುಗೊಳಿಸುವಂತೆ ಮನವಿ ಮಾಡಿ ಶಾಸಕರಿಗೆ ಎಚ್ಚರಿಕೆ ನೀಡಿರುವುದರ ಭಾಗವಾಗಿ  ಸ್ಥಳೀಯ ಶಾಸಕರು ಕೆಲಸವನ್ನು ನಿಲ್ಲಿಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಪ್ರಸ್ತುತ ಸ್ಥಳದ ಸುತ್ತಮುತ್ತಲು ಹಿಂದುಗಳೇ ಹೆಚ್ಚಿರುವುದು ಮತ್ತು ಕ್ರಮೇಣವಾಗಿ ಸ್ಕೂಲನ್ನು ಮಸೀದಿಯಾಗಿ ಪರಿವರ್ತನೆ ಮಾಡಿ ಕೋಮು ದ್ವೇಷ ಹರಡುವುದು ಇದರ ಹಿಂದಿನ ಅಜೆಂಡಾ ಎಂಬ ಸಂಘಪರಿವಾರದ ವಾದವನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಭಾರತವು ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ರಾಷ್ಟ್ರವಾಗಿದೆ. ಎಲ್ಲಾ ಜಾತಿ ಧರ್ಮದವರು ಪರಸ್ಪರ ಅನ್ಯೋನ್ಯತೆ, ಶಾಂತಿ ಮತ್ತು ಸೌಹಾರ್ದತೆಯಿಂದ  ಬದುಕುವ ರಾಷ್ಟ್ರವಾಗಿದೆ. ಹಿಂದೂಗಳು ಹೆಚ್ಚಿದ್ದು ಮುಸ್ಲಿಮರು ಕಡಿಮೆ ಇರುವ ಜಾಗದಲ್ಲಿ ಮಸೀದಿ ಅಥವಾ ಅರೇಬಿಕ್ ಸ್ಕೂಲ್ ನಿರ್ಮಾಣ ಮಾಡಬಾರದು ಅದೇ ರೀತಿ ಮುಸ್ಲಿಮರು ಹೆಚ್ಚಿದ್ದು ಹಿಂದೂಗಳು ಕಡಿಮೆ ಇರುವ ಜಾಗದಲ್ಲಿ ಮಂದಿರ ನಿರ್ಮಾಣ ಮಾಡಬಾರದೆಂದು ಸಂವಿಧಾನದಲ್ಲಿ ಅಥವಾ ಕಾನೂನಿನಲ್ಲಿ ಉಲ್ಲೇಖವೇನು ಮಾಡಿಲ್ಲ ಎಂದು ಹೇಳಿದ್ದಾರೆ.
ಸಂಘಪರಿವಾರದ ಇತಿಹಾಸವೇ ಕೋಮು ಗಲಭೆ ನಡೆಸಿ ಹಿಂದು-ಮುಸ್ಲಿಂ-ಕ್ರೈಸ್ತ ರನ್ನು ಪರಸ್ಪರ ಶತ್ರುಗಳನ್ನು ಮಾಡಿರುವುದಾಗಿದೆ.
ಅದರ ಭಾಗವಾಗಿ ಸಂಘಪರಿವಾರ ಆಕ್ಷೇಪಣೆಯನ್ನು ಎತ್ತದ್ದೇ ಹೊರತು ಬೇರೇನು ಅಲ್ಲ. ಸಂಘಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲ ಹಿಂದಿನಿಂದಲೂ ಪುತ್ತೂರಿನ ಶಾಂತಿ ಸೌಹಾರ್ದತೆಯನ್ನು ಕದಡಲು ಪ್ರಯತ್ನ ಪಡುತ್ತಿರುವ ಕೋಮುವಾದಿಯಾಗಿದ್ದು,  ಪ್ರಸಕ್ತವಾಗಿ ಈ ವಿಚಾರವನ್ನು ಮುಂದಿಟ್ಟುಕೊಂಡು ನಗರದ ಶಾಂತಿ ಸಾಮರಸ್ಯವನ್ನು ಕದಡಲು ಪ್ರಯತ್ನ ಪಡುತ್ತಿದ್ದಾರೆ,ಪೋಲಿಸ್ ಇಲಾಖೆಯು ತಕ್ಷಣ ಕಾರ್ಯಪ್ರವೃತಗೊಂಡು ಈತನನ್ನು ಪುತ್ತೂರಿನಿಂದ ಗಡಿಪಾರು ಗೊಳಿಸಿ ತಾಲೂಕಿನ ಶಾಂತಿ ಸಾಮರಸ್ಯವನ್ನು ಕಾಪಾಡಬೇಕಾಗಿದೆ ಎಂದು ಸಿದ್ದೀಕ್ ಆಗ್ರಹಿಸಿದ್ದಾರೆ.
ಪ್ರಸ್ತುತ ಜಾಗದಲ್ಲಿ ಶಾಲೆ ನಿರ್ಮಿಸಲು ಸ್ಥಳೀಯರ ಆಕ್ಷೇಪಣೆವೇನು ಇಲ್ಲ,ಆದರೆ ಸಂಘಪರಿವಾರದ ನಾಯಕರು ಪುತ್ತೂರಿನಲ್ಲಿ ಗಲಭೆ ಸೃಷ್ಟಿಸುವ ಷಡ್ಯಂತರದ ಭಾಗವಾಗಿ ಸ್ಥಳೀಯರನ್ನು ಪ್ರಚೋದಿಸುತ್ತಿದ್ದಾರೆ. ಅದೇ ರೀತಿ ಸ್ಥಳೀಯ ಶಾಸಕರು ಸಂಘಪರಿವಾರದ ಅಣತಿಯಂತೆ ಕಾರ್ಯ ನಿರ್ವಹಿಸುವುದನ್ನು ಬಿಟ್ಟು ಸ್ಥಳೀಯ ಯೋಜನಾ ಪ್ರಾಧಿಕಾರದ ಶಿಫಾರಸು ಮಾಡಿದ ಕೆಲಸವನ್ನು ಶೀಘ್ರದಲ್ಲೇ ಪುನರಾರಂಭಿಸಬೇಕು. ಇಲ್ಲದಿದ್ದರೆ SDPI ಪಕ್ಷ  ಕಾನೂನು ರೀತಿಯಲ್ಲಿ  ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು