ವಿಟ್ಲ(04-01-2020): ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವಿಟ್ಲ ವಲಯ ಕಚೇರಿಗೆ ದುಷ್ಕರ್ಮಿಗಳು ತಡರಾತ್ರಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ವಿಟ್ಲದ ಮೇಗಿನ ಪೇಟೆಯಲ್ಲಿರುವ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಘಟನೆಯನ್ನು ಎಸ್ ಡಿಪಿಐ ನಾಯಕರಾದ ಕಲಂದರ್ ಪರ್ತಿಪ್ಪಾಡಿ ಮತ್ತು ಶಾಕೀರ್ ಅಳಕೆಮಜಲು ಖಂಡಿಸಿದ್ದಾರೆ.
ಘಟನೆಯನ್ನು ಖಂಡಿಸಿ ಇಂದು ಬೆಳಿಗ್ಗೆ 9 ಗಂಟೆಗೆ ಎಸ್ ಡಿಪಿಐ ವಿಟ್ಲ ವಲಯ ಕಚೇರಿ ಬಳಿ ಪ್ರತಿಭಟನೆ ನಡೆಯಲಿದೆ.