ವಿಟ್ಲ(11-02-2021): ಬೆಳ್ತಂಗಡಿಯಲ್ಲಿ ಪ್ರಚೋದನಾ ಕಾರಿ ಭಾಷಣವನ್ನು ಮಾಡಿ ಜನರನ್ನು ಕೆರಳಿಸಿದ್ದ ಸಚಿವ ಕೆ.ಎಸ್ ಈಶ್ವರಪ್ಪ ಮತ್ತು ಹರೀಶ್ ಪೂಂಜಾ ವಿರುದ್ಧ ಎಸ್ ಡಿಪಿಐ ವಿಟ್ಲ ಠಾಣೆಯಲ್ಲಿ ದೂರನ್ನು ದಾಖಲಿಸಿದೆ.
ಬೆಳ್ತಂಗಡಿಯಲ್ಲಿ ಇತ್ತೀಚೆಗೆ ಬಿಜೆಪಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸಚಿವ ಈಶ್ವರಪ್ಪ ಗೋವನ್ನು ಕಡಿಯುವವರ ಕೈ ಕಡಿಯಿರಿ, ನಾಲಗೆಯನ್ನು ಸೀಳಿರಿ ಎಂದು ಹೇಳಿಕೆಯನ್ನು ನೀಡಿದ್ದರು. ಶಾಸಕ ಹರೀಶ್ ಪೂಂಜಾ ಕೂಡ ಅವಹೇಳನಾಕಾರಿ ಹೇಳಿಕೆಯನ್ನು ನೀಡಿದ್ದರು. ಇದರ ವಿರುದ್ಧ ದೂರು ದಾಖಲಿಸಲಾಗಿದೆ.
ಈ ವೇಳೆ ಶಾಕೀರ್ ಅಳಕೆ ಮಜಲು, ಕಲಂದರ್ ಪರ್ತಿಪ್ಪಾಡಿ, ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.