ಬೆಳ್ತಂಗಡಿ(31-12-2020): ಬೆಳ್ತಂಗಡಿ ಮತಎಣಿಕೆ ಕೇಂದ್ರದ ಬಳಿ ಎಸ್ ಡಿಪಿಐ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆಂದು ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ 6ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ಆರೆಸ್ಸೆಸ್ ಬಲಪಂಥೀಯ ಸಂಘಟನೆ ಪಾಕ್ ಪರ ಘೋಷಣೆ ಕೂಗಲಾಗಿದೆ ಎಂದು ಹೇಳಿದೆ. ಎಸ್ ಡಿಪಿಐ, ಪಕ್ಷದ ಪರವಾಗಿ ಘೋಷಣೆ ಹಾಕಿರುವುದು ಎಂದು ಪ್ರತಿಪಾದಿಸಿದೆ. ಇದನ್ನು ವೈರಲ್ ವಿಡಿಯೋ ಕೂಡ ಸಾಬೀತುಪಡಿಸಿದೆ
ಎಸ್ ಡಿಪಿಐ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಘೋಷಣೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರೆಂದು ಎಸ್ ಡಿಪಿಐ ಕಾರ್ಯಕರ್ತರ ಮೇಲೆ ಆರೋಪವನ್ನು ಹೊರಿಸಲಾಗಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಈ ಕುರಿತು ಪೊಲೀಸರಿಗೆ ದೂರನ್ನು ನೀಡಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು ದಿಗ್ವಿಜಯ ಚಾನಲ್ ವರದಿಯನ್ನು ಕೂಡ ಮಾಡಿತ್ತು.
ಆದರೆ ವಾಸ್ತವ ವೈರಲ್ ವಿಡಿಯೋವನ್ನು ಗಮನಿಸಿದಾಗ ವಿಡಿಯೋದಲ್ಲಿ ಎಸ್ ಡಿಪಿಐ ಜಿಂದಾಬಾದ್ ಎಂದು ವೇಗವಾಗಿ ಘೋಷಣೆ ಕೂಗುವುದು ಕೇಳಿಬರುತ್ತಿದೆ. ಇದನ್ನೇ ಪಾಕಿಸ್ತಾನ ಜಿಂದಾಬಾದ್ ಎಂದು ಟಿವಿ ಚಾನಲ್ ದಿಗ್ವಿಜಯ ಜವಾಬ್ಧಾರಿ ಮೆರೆತು ಸುದ್ದಿ ಮಾಡಿದೆ ಎಂದು ಎಸ್ ಡಿಪಿಐ ಆರೋಪಿಸಿದೆ. ಟಿವಿ ಚಾನಲ್ ವರದಿಗಾರನ ವಿರುದ್ಧ ಕೇಸನ್ನು ಕೂಡ ಎಸ್ ಡಿಪಿಐ ದಾಖಲಿಸಿದೆ.
ವೈರಲ್ ಆದ ಹಲವು ವಿಡಿಯೋಗಳನ್ನು ಗಮನಿಸಿದಾಗ ಯಾವುದರಲ್ಲೂ ಎಸ್ ಡಿಪಿಐ ಕಾರ್ಯಕರ್ತರು ಪಾಕ್ ಪರ ಘೋಷಣೆ ಕೂಗುವುದು ಕಂಡುಬರುವುದಿಲ್ಲ. ಆದರೆ ಕೇಸ್ ದಾಖಲಿಸಿರುವುದು ಯಾಕೆ ಎಸ್ಡಿಪಿಐ ಜಿಂದಾಬಾದ್ ಎನ್ನುತ್ತಿರುವುದು ಬಿಜೆಪಿಗರಿಗೆ ಪಾಕ್ ಜಿಂದಾಬಾದ್ ಎಂದು ಕೇಳಿದ್ದೇಗೆ? ಅವರು ಪಾಕ್ ನ ಜಪ ಯಾಕೆ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.