ಅ.15ಕ್ಕೆ ಶಾಲಾ –ಕಾಲೇಜುಗಳು ಆರಂಭವಾಗುತ್ತಾ?

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಡಿಕೇರಿ(06-10-2020): ಅ.15ರ ಬಳಿಕವೂ ರಾಜ್ಯದಲ್ಲಿ ಶಾಲೆಗಳನ್ನು ತೆರೆಯುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

 ಮಡಿಕೇರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ ಶಾಲೆ ಆರಂಭಿಸುವ ಕುರಿತು ಸಧ್ಯಕ್ಕೆ ನಿರ್ಧಾರವಿಲ್ಲ ಎಂದು ಹೇಳಿದ್ದಾರೆ.

ಕೇಂದ್ರದ ಮಾರ್ಗಸೂಚಿಯಂತೆ ಶಾಲೆಗಳನ್ನು ರಾಜ್ಯದಲ್ಲಿ ತೆರೆಯಲಾಗುತ್ತದೆ ಎನ್ನಲಾಗಿತ್ತು.ಈ ಮೊದಲು ಅ.1ಕ್ಕೆ ರಾಜ್ಯದಲ್ಲಿ ಶಾಲಾ ಕಾಲೇಜುಗಳು ಆರಂಭವಾಗುತ್ತದೆ ಎಂಬ ಊಹಾಪೋಹಗಳು ಹಬ್ಬಿತ್ತು. ಇದೀಗ ಮತ್ತೆ ಅ.15ಕ್ಕೆ ಶಾಲಾ ಕಾಲೇಜುಗಳು ಆರಂಭವಾಗುತ್ತದೆ ಎನ್ನುವ ಸುದ್ದಿಗಳು ಹರಡುತ್ತಿದೆ. ಇದಕ್ಕೆ ಸಚಿವರು ಸ್ಪಷ್ಟನೆಯನ್ನು ನೀಡುತ್ತಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು