ಶಿಕ್ಷಕರ ವರ್ಗಾವಣೆಗೆ ಅನುಮತಿ ನೀಡಲು ಚುನಾವಣಾಧಿಕಾರಿಗೆ ಮನವಿ

school
Share on facebook
Share on twitter
Share on linkedin
Share on whatsapp
Share on telegram
Share on email
Share on print

ಹುಬ್ಬಳ್ಳಿ(09-10-2020): ಶಿಕ್ಷಕರ ವರ್ಗಾವಣೆಗಗೆ ಅನುಮತಿ ನೀಡುವ ಬಗ್ಗೆ  ಕರ್ನಾಟಕ  ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಗಳಿಗೆ ಕರ್ನಾಟಕ  ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ ರಾಜ್ಯ ಘಟಕ ಹುಬ್ಬಳ್ಳಿ ಇದರ ಸರ್ವ ಪದಾಧಿಕಾರಿಗಳು ಮನವಿಯನ್ನು ಮಾಡಿಕೊಂಡಿದ್ದಾರೆ.

ಶಿಕ್ಷಕರ ವರ್ಗಾವಣೆಯು ಕಳೆದ ಐದು ರ್ಷಗಳಲ್ಲಿ ಒಂದು ಬಾರಿ ಮಾತ್ರ ನಡೆದಿದೆ. ವರ್ಗಾವಣೆಗಾಗಿ ಜಾತಕ ಪಕ್ಷಿಯಂತೆ ಕಾದಿರುವ ವರ್ಗಾವಣೆ ಅಪೇಕ್ಷಿತರು ಕಂಗೆಟ್ಟಿರುವರು. ತೀವ್ರತರ ಕಾಯಿಲೆಯುಳ್ಳವರು.ವಿಕಲ ಚೇತನರು.ಪತಿ ಪತ್ನಿಯರು.ವಿಧವೆಯರು ಹತಾಶರಾಗಿ ಭ್ರಮ ನಿರಶನಗೊಂಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶಿಕ್ಷಕರ ವರ್ಗಾವಣೆಗಳು ಕೌನ್ಸಲಿಂಗ್ ಮೂಲಕ ಹಾಗೂ ಕೋರಿಕೆ ಮತ್ತು ಪರಸ್ಪರ ಮಾತ್ರ ನಡೆಯುತ್ತವೆ. ಚುನಾವಣಾ ನೀತಿ ಸಂಹಿತೆಯಿಂದ ವರ್ಗಾವಣೆ ಪ್ರಕ್ರಿಗೆ ತಡೆನೀಡದೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳವರಿಗೆ ವರ್ಗಾವಣೆ ಪ್ರಕ್ರಿಯೆ ನಡೆಸಲು ಅನುಮತಿಸಿ ನಾಡಿನ ವರ್ಗಾವಣೆ ಅಪೇಕ್ಷಿತರ ಪಾಲಿಗೆ ಅನುಕೂಲ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದಾರೆ.

ಮುಂಬರುವ ಚುನಾವಣೆಗಳಲ್ಲಿ  ಕಾರ್ಯ ನಿರ್ವಹಿಸುವ ಮತಗಟ್ಟೆ ಅಧಿಕಾರಿಗಳಿಗೆ ಮತದಾನದ ದಿನ ತಡರಾತ್ರಿ ಆಗುವುದರಿಂದ ಮತದಾನದ ಮಾರನೇ ದಿನವನ್ನು ಅನ್ಯ ಕಾರ್ಯ ನಿಮಿತ್ತ ಎಂದು ಪರಿಗಣಿಸಬೇಕೆಂದು ಹಾಗೂ ಗೌರವ ಧನವನ್ನು ಎರಡು ಪಟ್ಟು ಹೆಚ್ಚಿಸಬೇಕೆಂದು ಮನವಿಯನ್ನು ಮಾಡಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು