ಹೊಸದೆಹಲಿ:(12/10/2020): ಕೋವಿಡ್-19 ಕಾರಣದಿಂದ ಮುಚ್ಚಿರುವ ಶಾಲೆಗಳಿಂದ ದೇಶದ ಬೊಕ್ಕಸಕ್ಕೆ 29.33 ಲಕ್ಷ ಕೋಟಿ ನಷ್ಟ ಸಂಭವಿಸುವ ಸಾಧ್ಯತೆ ಎಂದು ವಿಶ್ವಬ್ಯಾಂಕ್ನ ವರದಿ ತಿಳಿಸಿದೆ.
ಕೋವಿಡ್ 19 ಕಾರಣದಿಂದ 55 ಲಕ್ಷ ಮಕ್ಕಳು ಶಾಲೆ ಬಿಡುವ ಆತಂಕವಿದ್ದು, ಇದು ವಿದ್ಯಾರ್ಥಿಗಳ ಕೆಟ್ಟ ಪರಿಣಾಮ ಬೀರಲಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.
‘ಕೋವಿಡ್ ಕಾರಣದಿಂದಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಶಾಲೆಗಳು ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯ 39.1 ಕೋಟಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.