ರಾಯಚೂರು (05-11-2020): ಹಿರೇಕೊಟ್ನೆಕಲ್ ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಕಳ್ಳರು ದರೋಡೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.
ನಿನ್ನೆ ರಾತ್ರಿ ಈ ಕೃತ್ಯ ನಡೆದಿದ್ದು ಬ್ಯಾಂಕಿನ ಹೊರಗೆ ಇದ್ದ ಸಿಸಿ ಕ್ಯಾಮೆರಾವನ್ನು ಜಖಂಗೊಳಿಸಿ, ಮುಖ್ಯ ಬಾಗಿಲು ಮುರಿದು ಕಳ್ಳರು ಬ್ಯಾಂಕ್ ಶಾಖೆಯ ಒಳಗೆ ಪ್ರವೇಶಿಸಿದ್ದರು.
ಇದೇ ವೇಳೆ, ಗಸ್ತು ಬಂದ ಪೊಲೀಸರಿಗೆ ಬ್ಯಾಂಕ್ ಬಾಗಿಲು ತೆರೆದಿರುವುದು ಕಂಡ ಕಾರಣ ಅವರೂ ಒಳಪ್ರವೇಶಿಸಿದ್ದಾರೆ. ಅನಿರೀಕ್ಷಿತವಾಗಿ ಬಂದ ಪೊಲೀಸರನ್ನು ನೋಡಿ ಕಳ್ಳರು ಪರಾರಿಯಾಗೆಲೆತ್ನಿಸಿದ್ದಾರೆ.
ಈ ವೇಳೆ ಪೊಲೀಸರು ಬೆನ್ನಟ್ಟಿದಾಗ ಒಬ್ಬ ಕಳ್ಳ ಸಿಕ್ಕಿಬಿದಿದ್ದಾನೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಈ ಕುರಿತು ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.