ಶವಗಳ ಮೇಲೆ ರಾಜಕೀಯ ಮಾಡುವುದು ಬಿಜೆಪಿಯ ಹುಟ್ಟುಗುಣ: ರಾಜ್ಯ ಕಾಂಗ್ರೆಸ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಶವಪೆಟ್ಟಿಗೆ ಹಗರಣದಿಂದ ಹಿಡಿದು ಕರೋನಾದವರೆಗೂ ಶವಗಳ ಮೇಲೆ ರಾಜಕೀಯ ಮಾಡುವುದು, ಭ್ರಷ್ಟಾಚಾರ ಮಾಡುವುದು ಬಿಜೆಪಿಯ ಹುಟ್ಟುಗುಣ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿದ ಕಾಂಗ್ರೆಸ್ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಗುಡುಗಿದೆ,
ಲಸಿಕೆ ಕೊಡಿ ಅಂದ್ರೆ ನೇಣು ಹಾಕ್ಕೋಬೇಕಾ ಎಂದು ಕೇಳಿದ ಕೈಲಾಗದ ಕೇಂದ್ರ ಮಂತ್ರಿ ಡಿ.ವಿ‌.ಸದಾನಂದಗೌಡ ಅವರು ಅಗತ್ಯವಿರುವ ಕೆಲಸ ಮಾಡುವುದನ್ನ ಬಿಟ್ಟು ಪುಡಿ ರಾಜಕೀಯ ಮಾಡಲು ಹೆಬ್ಬಾಳಕ್ಕೆ ಓಡೋಡಿ ಬಂದಿದ್ದಾರೆ ಎಂದು ಆರೋಪಿಸಿದೆ.

ಹೆಬ್ಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಅವರ ಪ್ರಯತ್ನದಲ್ಲಿ ಸುಮಾರು 100 ಹಾಸಿಗೆಯ ರಾಜೀವ್ ಗಾಂಧಿ ಡೆಂಟಲ್ ಕಾಲೇಜ್‌ನಲ್ಲಿ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ನಿರ್ಮಾಣವಾಗಿ ಸೋಂಕಿತರ ಚಿಕಿತ್ಸೆಗೆ ಅನುಕೂಲವಾಗಿತ್ತು.
ಇದರ ವೆಚ್ಚದಲ್ಲಿ ಬಿಬಿಎಂಪಿ 30% ಉಳಿದ 70% ಪಾಲನ್ನು ಶಾಸಕರು ದಾನಿಗಳ ಸಹಕಾರದಲ್ಲಿ ಭರಿಸಿದ್ದರು.

ಶಾಸಕ ಭೈರತಿ ಸುರೇಶ್ ಶ್ರದ್ಧೆಯಲ್ಲಿ ನಿರ್ಮಾಣವಾದ ಕೋವಿಡ್ ಕೇರ್ ಸೆಂಟರ್‌‌ನ್ನು ನೋಡಿ ಸಹಿಸಲಾಗದೆ, ಕೇಂದ್ರ ಮಂತ್ರಿಯಾಗಿ ನೆರವು ನೀಡುವ ಬದಲು ಸ್ಥಾನದ ಘನತೆ ಮರೆತು ಕ್ಷುಲ್ಲಕ ತಕರಾರು ತೆಗೆಯಲು ಬಂದ ಡಿ.ವಿ‌.ಸದಾನಂದ ಗೌಡ ಅವರೇ ರಾಜ್ಯಕ್ಕೆ ಯಾವ ನ್ಯಾಯ ಸಲ್ಲಿಸಿದ್ದೀರಿ ಹೇಳಿ? ಎಂದು ಪ್ರಶ್ನಿಸಿದೆ.

ನಿಮಗಂತೂ ಘನತೆ ಇಲ್ಲ ನಿಮ್ಮ ಸ್ಥಾನದ ಘನತೆಯನ್ನಾದರೂ ಉಳಿಸಿ ತಾವೇ ಫಾರ್ಮಾಸುಟಿಕಲ್ ಮಂತ್ರಿಯಾಗಿ ರಾಜ್ಯಕ್ಕೆ ರೆಮಿಡಿಸಿವಿರ್, ಅಂಪೊಟರಿಸನ್, ಲಸಿಕೆ ಮುಂತಾದವುಗಳ ಹಂಚಿಕೆಯಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯವಾದರೂ ಪ್ರಶ್ನಿಸದೆ ಮೋದಿ ಎದುರು ಗೋಣು ಬಗ್ಗಿಸಿ ನಿಲ್ಲುವ ನೀವು ನೇಣು ಹಾಕ್ಕೋಬೇಕಾ ಎಂದು ಕೇಳುವುದು ನಾಚಿಕೆಗೇಡು. ಆ ಅವಮಾನ ಮರೆತು ಚಿಲ್ಲರೆ ರಾಜಕೀಯ ಮಾಡಲು ನಾಚಿಕೆ ಎನಿಸಿಲ್ಲವೇ? ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು