ದಮಾಮ್(24/10/2020): ಮುಂದಿನ ತಿಂಗಳ ಆರಂಭದಲ್ಲಿ ಭಾರತದಿಂದ ಸೌದಿ ಅರೇಬಿಯಾಕ್ಕೆ ವಿಮಾನಸೇವೆಗಳು ಪುನರಾರಂಭಗೊಳ್ಳಲಿದೆ ಎಂದು ಸೌದಿಯ ವಿಮಾನಯಾನ ಸಂಸ್ಥೆ ತಿಳಿಸಿದೆ.
ಕೋವಿಡ್ 19 ಹಿನ್ನೆಲೆಯಲ್ಲಿ ಭಾರತದಿಂದ ಸೌದಿ ಅರೇಬಿಯಾಕ್ಕೆ ವಿಮಾನ ಯಾನ ಸೇವೆಗಳನ್ನು ರದ್ದುಪಡಿಸಲಾಗಿತ್ತು.
ಇದೀಗ ಮುಂದಿನ ತಿಂಗಳಿನಿಂದ ಕೋವಿಡ್ 19 ಹೊಸ ನಿಯಮಗಳೊಂದಿಗೆ ವಿಮಾನಯಾನ ಆರಂಭಗೊಳಿಸುವುದಾಗಿ ಸೌದಿ ವಿಮಾನಯಾನ ಸಂಸ್ಥೆ ಹೇಳಿದ್ದು, ಈ ಸಂಬಂಧ ಎರಡು ವೇಳಾಪಟ್ಟಿಗಳು ಬಿಡುಗಡೆ ಮಾಡಿದೆ. ಕೊಚ್ಚಿ, ದೆಹಲಿ ಹಾಗೂ ಮುಂಬೈ ಎರಡನೇ ವೇಳಾಪಟ್ಟಿಯಲ್ಲಿದೆ.
ಅಕ್ಟೋಬರ್ ಮೊದಲ ವಾರದಲ್ಲಿ ಯುರೋಪ್, ಯುಎಸ್, ಆಫ್ರಿಕಾ ಹಾಗೂ ಮಧ್ಯಪ್ರಾಚ್ಯ ಸೇರಿದಂತೆ 20 ದೇಶಗಳಿಗೆ ಸೇವೆಯನ್ನು ಪ್ರಾರಂಭಿಸಲಾಗಿದೆ. ಕೋವಿಡ್ 19 ಕಾರಣದಿಂದ ಸೌದಿಗೆ ಹೋಗಲಾಗದೆ ಊರಲ್ಲಿ ಉಳಿದವರಿಗೆ ಆನ್ ಲೈನ್ ಮೂಲಕ ಇಖಾಮ, ರಿ-ಎಂಟ್ರಿ ನವೀಕರಿಸುವ ಸೌಲಭ್ಯವನ್ನು ಸೌದಿ ಪಾಸ್ ಪೋರ್ಟ್ ಸಚಿವಾಲಯ ಒದಗಿಸಿದೆ.