ರಿಲಯನ್ಸಿನಲ್ಲಿ ಸೌದಿ ಹೂಡಿಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜಿದ್ದಾ(5-11-2020): ಭಾರತದ ರಿಲಯನ್ಸ್ ಕಂಪೆನಿಯಲ್ಲಿ ಸೌದಿ ಮತ್ತೊಮ್ಮೆ ಹೂಡಿಕೆ ಮಾಡಿದೆ. ಕಳೆದ ಎರಡು ತಿಂಗಳುಗಳಲ್ಲಿ ರಿಲಯನ್ಸಿನ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಸೌದಿ ಹೂಡಿಕೆ ಮಾಡುತ್ತಿರುವುದು ಇದು ಎರಡನೆಯ ಬಾರಿ.

ಕಳೆದ ಬಾರಿ 2.32 ಶೇಕಡಾ ಶೇರುಗಳನ್ನು ಖರೀದಿಸಿದ್ದರೆ, ಈ ಬಾರಿ 9555 ಕೋಟಿ ರೂಪಾಯಿಗಳನ್ನು ವ್ಯಯಿಸಿ, 2.04 ಶೇಕಡಾ ಶೇರುಗಳನ್ನು ಸೌದಿ ತನ್ನದಾಗಿಸಿಕೊಂಡಿತು. ಈ ಹಣವನ್ನು ಸೌದಿ ಅರೇಬಿಯಾದ ಪಟ್ಟದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅಧೀನದ “ಸಾರ್ವಜನಿಕ ಹೂಡಿಕೆ ನಿಧಿ”ಯಿಂದ ವಿನಿಯೋಗಿಸಲಾಗಿದೆ.

ತೈಲೇತರ ಆದಾಯ ಮೂಲವನ್ನು ಸೃಷ್ಟಿಸುವ ಉದ್ದೇಶವನ್ನುಟ್ಟುಕೊಂಡು ಜಗತ್ತಿನ ಲಾಭದಾಯಕ ಕಂಪೆನಿಗಳಲ್ಲಿ ಹೂಡಿಕೆ ಮಾಡಲು ಸೌದಿ ಅರೇಬಿಯಾವು ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚು ಉತ್ಸಾಹ ತೋರಿಸುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು