ರಿಯಾದ್(10-12-2020): ಸೌದಿಯಲ್ಲಿ ಅವಧಿ ಮುಗಿದ ವೀಸಾಗಳನ್ನು ನವೀಕರಿಸಲಾಗದು ಮತ್ತು ಅವಧಿಯನ್ನು ವಿಸ್ತರಿಸಲಾಗದು ಎಂದು ಸೌದಿ ಹೇಳಿದೆ. ಸೌದಿ ಪ್ರಜೆಯೊಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಸೌದಿಯ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಈ ವಿಚಾರವನ್ನು ತಿಳಿಸಿದೆ.
ವಿದೇಶಿಗಳನ್ನು ಉದ್ಯೋಗಕ್ಕೆ ನೇಮಿಸಲು ತೆಗೆದುಕೊಳ್ಳಲಾದ ವೀಸಾಗಳು ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಉದ್ಯೋಗಿಗಳನ್ನು ನೇಮಿಸಲು ಸಾಧ್ಯವಾಗಿರಲಿಲ್ಲ. ಲಾಕ್ಡೌನ್ ಕೊನೆಗೊಂಡು, ಅಂತರಾಷ್ಟ್ರೀಯ ಗಡಿಗಳು ತೆರೆಯುವ ಹೊತ್ತಿನಲ್ಲಿ ಆ ವೀಸಾಗಳ ಅವಧಿಯೂ ಮುಗಿಯಿತು. ಈ ವೀಸಾಗಳ ಕಾಲಾವಧಿ ವಿಸ್ತರಿಸಬಹುದೇ? ಅಥವಾ ಅವುಗಳನ್ನು ನವೀಕರಿಸಬಹುದೇ ಅಥವಾ ಹೊಸ ವೀಸಾಗಳಿಗೆ ಅರ್ಜಿ ಸಲ್ಲಿಸಬೇಕೇ ಎಂದು ಸೌದಿ ಪ್ರಜೆ ಸಚಿವಾಲಯವನ್ನು ಪ್ರಶ್ನಿಸಿದ್ದರು.
ಸೌದಿ ಅರೇಬಿಯಾದಲ್ಲಿ ಉದ್ಯೋಗ ವೀಸಾದ ಕಾಲಾವಧಿಯು ಎರಡು ವರ್ಷಗಳಾಗಿದ್ದು, ಅವಧಿ ಮುಗಿದ ಬಳಿದ ಇದನ್ನು ವಿಸ್ತರಿಸಲೋ, ನವೀಕರಿಸಲೋ ಸಾಧ್ಯವಿಲ್ಲವೆಂದು ಸಚಿವಾಲಯವು ಉತ್ತರಿಸಿತು.