ಸೌದಿ ಅರೇಬಿಯಾ: ಪ್ರಯಾಣ ನಿಷೇಧದ ಕಾರಣದಿಂದ ಊರಿನಲ್ಲಿ ಉಳಿದುಕೊಂಡಿರುವ ಅನಿವಾಸಿಗಳ ವೀಸಾಗಳ ಉಚಿತ ನವೀಕರಣ

Share on facebook
Share on twitter
Share on linkedin
Share on whatsapp
Share on telegram
Share on email
Share on print

ರಿಯಾದ್: ಕೋವಿಡ್ ಎರಡನೇ ಅಲೆಯು ತೀವ್ರಗೊಂಡ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳ ಪ್ರಯಾಣಿಕರಿಗೆ ಸೌದಿ ಅರೇಬಿಯಾಗೆ ಆಗಮಿಸಲು ನಿಷೇಧ ಹೇರಲಾಗಿತ್ತು. ಕಾರಣದಿಂದಾಗಿ ಸೌದಿಗೆ ಪ್ರಯಾಣಿಸಲು ಸಾಧ್ಯವಾಗದೇ ಊರಿನಲ್ಲಿ ಉಳಿದುಕೊಂಡವರಿಗೆ ಶುಭ ಸುದ್ದಿಯೊಂದು ಬಂದಿದೆ.

ಇಂತಹ ಅನಿವಾಸಿಗಳ ವೀಸಾಗಳನ್ನು ಉಚಿತವಾಗಿ ನವೀಕರಿಸಲು ಸೌದಿ ದೊರೆ ಸಲ್ಮಾನ್ ವಿಶೇಷ ಅಧಿಸೂಚನೆ ನೀಡಿರುತ್ತಾರೆ. ಇಕಾಮ, ಸಂದರ್ಶನ ವೀಸಾಗಳು, ರೀ ಎಂಟ್ರೀ ವೀಸಾಗಳೂ ಉಚಿತ ನವೀಕರಣದ ವ್ಯಾಪ್ತಿಯಲ್ಲಿ ಒಳಪಡುತ್ತವೆ. ಜೂನ್ ಎರಡನೇ ತಾರೀಖಿನವರೆಗೆ ವೀಸಾಗಳನ್ನು ನವೀಕರಣ ಮಾಡಲಾಗುವುದೆಂದು ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪ್ರಕ್ರಿಯೆಯು ಪೂರ್ಣಗೊಳ್ಳಲಿದ್ದು, ಸೌದಿ ಹಣಕಾಸು ಸಚಿವಾಲಯವು ಇದರ ಸಂಪೂರ್ಣ ವೆಚ್ಚವನ್ನು ಭರಿಸಲಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು