ಜಿದ್ದಾ(7-11-2020): ಕೊರೋನಾ ತಗುಲಿ ಮೃತಪಟ್ಟ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೂ ಧನ ಸಹಾಯ ವಿತರಿಸುವುದಕ್ಕಾಗಿ ವಿಶೇಷ ಸಮಿತಿ ರಚಿಸಲಾಗಿದೆ. ಸೌದಿಯ ಸಲ್ಮಾನ್ ದೊರೆಯ ಅಧ್ಯಕ್ಷತೆಯಲ್ಲಿ ನಡೆದ ಮಂತ್ರಿ ಮಂಡಲವು ಈ ಸಮಿತಿಯನ್ನು ರಚಿಸಿದೆ.
ಕೊರೋನಾ ಆರಂಭಗೊಂಡಂದಿನಿಂದಲೂ ಕೊರೋನಾ ತಗುಲಿ ಮೃತಪಟ್ಟ ವೈದ್ಯರು, ನರ್ಸುಗಳು ಮತ್ತಿತರ ಎಲ್ಲಾ ವೈದ್ಯಕೀಯ ಕಾರ್ಯಕರ್ತರ ಕುಟುಂಬಗಳಿಗೂ ಪರಿಹಾರ ಧನ ವಿತರಿಸಲಾಗುವುದು. ಪ್ರತಿಯೊಬ್ಬರಿಗೂ ತಲಾ ಐದು ಲಕ್ಷ ರಿಯಲುಗಳು, ಅಂದರೆ ಸರಿಸುಮಾರು ಒಂದು ಕೋಟಿ ಭಾರತೀಯ ರೂಪಾಯಿಗಳನ್ನು ನೀಡಲಾಗುವುದೆಂದು ಸಂಬಂಧಪಟ್ಟವರು ತಿಳಿಸಿರುತ್ತಾರೆ.
ಸಾರ್ವಜನಿಕ ಮತ್ತು ಖಾಸಗಿ ಎರಡೂ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದ ಆರೋಗ್ಯ ಕಾರ್ಯಕರ್ತರಿಗೂ ಇದು ಅನ್ವಯವಾಗಲಿದ್ದು, ಆರೋಗ್ಯ ಸಚಿವಾಲಯ, ಮಾನವ ಸಂಪನ್ಮೂಲ ಸಚಿವಾಲಯ ಮತ್ತು ಹಣಕಾಸು ಸಚಿವಾಲಯಗಳ ಪ್ರತಿನಿಧಿಗಳು ಈ ಸಮಿತಿಯ ಭಾಗವಾಗಿದ್ದಾರೆ.