ಜಿದ್ದಾ(6-11-2020): ವಿವಿಧ ರೀತಿಯ ವಾಹನಗಳಿಗೆ ಮತ್ತು ವಿವಿಧ ವೇಗಗಳಿಗೆಂದು ಮೀಸಲಿರಿಸಿದ ರಸ್ತೆ ಟ್ರಾಕುಗಳನ್ನು ಉಲ್ಲಂಘಿಸುವವರನ್ನು ಸುಲಭವಾಗಿ ಪತ್ತೆಹಚ್ಚುವ ಅತ್ಯಾಧುನಿಕ ತಂತ್ರಜ್ಞಾನ ಶೀಘ್ರದಲ್ಲೇ ಸ್ಥಾಪಿಸಲಾಗುವುದೆಂದು ಸೌದಿ ಟ್ರಾಫಿಕ್ ಇಲಾಖೆ ತಿಳಿಸಿದೆ.
ಸ್ಮಾರ್ಟ್ ಮೊನಿಟರಿಂಗ್ ತಂತ್ರಜ್ಞಾನವೆಂದು ಕರೆಯಲಾಗುವ ಇದನ್ನು ಮೊದಲು ರಿಯಾದ್, ಜಿದ್ದಾ, ದಮಾಮ್ ಎಂಬೀ ಮೂರು ಸ್ಥಳಗಳಲ್ಲಿ ಸ್ಥಾಪಿಸಲಾಗುವುದೆಂದು ಪ್ರಕಟಣೆ ತಿಳಿಸಿದೆ.
ಟ್ರಾಕುಗಳನ್ನು ಉಲ್ಲಂಘಿಸುವುದು ಸೌದಿ ಕಾನೂನಿಗೆ ವಿರುದ್ಧವಾಗಿದೆ. ಇದು ಹಲವಾರು ಅಪಘಾತಗಳಿಗೆ ಕಾರಣವಾಗಿದ್ದು, ಶೀಘ್ರದಲ್ಲೇ ಸ್ಥಾಪಿಸಲಾಗುವ ಆಟೋಮ್ಯಾಟಿಕ್ ಸ್ಮಾರ್ಟ್ ವ್ಯವಸ್ಥೆಯು ಇದಕ್ಕೆ ತಡೆಯಾಗಲಿದೆಯೆಂದು ಟ್ರಾಫಿಕ್ ಅಧಿಕಾರಿಗಳು ತಿಳಿಸಿದ್ದಾರೆ.