ಸೌದಿ ವಿಮಾನ ನಿಲ್ದಾಣಗಳಲ್ಲಿ ಬೆರಳಚ್ಚು ಬದಲು ಐರಿಸ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜಿದ್ದಾ(11-11-2020): ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳಲ್ಲಿನ್ನು ಬೆರಳಚ್ಚು ಬದಲು ಐರಿಸ್ ಎನ್ನಲಾಗುವ ಕಣ್ಣು ಪೊರೆಯ ಛಾಯೆಯನ್ನು ಸ್ವೀಕರಿಸಲಾಗವುದು. ಸದ್ಯಕ್ಕೆ ಇದು ಚಾಲ್ತಿಗೆ ಬಂದಿರದಿದ್ದರೂ ಶೀಘ್ರದಲ್ಲೇ ವ್ಯವಸ್ಥೆಗೊಳಿಸಲಾಗುವುದೆಂದು ಜವಾಝಾತ್ ಡಿಪಾರ್ಟ್ಮೆಂಟ್ ಹೇಳಿದೆ.

ವಿದೇಶದಿಂದ ಬರುವವರ ಐರಿಸ್ ಛಾಯೆಯ ದಾಖಲಾತಿಗಾಗಿ, ಶೀಘ್ರದಲ್ಲೇ ಗುಣಮಟ್ಟದ ಉಪಕರಣಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಇದು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ತುಂಬಾ ಮಹತ್ವದ್ದಾಗಿದೆ ಎನ್ನಲಾಗಿದೆ.

ವಯಸ್ಸಾದಂತೆ ಬೆರಳಚ್ಚು ಬದಲಾಗುವ ಸಾಧ್ಯತೆಯಿದೆ. ಅದೇ ರೀತಿ ಕೈಗಳಿಂದ ನಿರಂತರ ಕೆಲಸದಲ್ಲಿ ಏರ್ಪಟ್ಟಾಗಲೂ ಅಲ್ಪ ಸಮಯಕ್ಕೆ ಅದು ಬದಲಾಗಲೂ ಬಹುದು. ಆದರೆ ಕಣ್ಣುಪೊರೆಯ ರಚನೆಯಲ್ಲಿ ಮರಣದವರೆಗೂ ವ್ಯತ್ಯಾಸವಾಗಲು ಸಾಧ್ಯತೆಯಿಲ್ಲ. ಎಡ ಮತ್ತು ಬಲ ಕಣ್ಣುಗಳ ಪೊರೆಗಳ ನಡುವೆಯೂ ವಿಭಿನ್ನತೆಯಿದೆ. ಹೀಗಾಗಿ ಇದು ಹೆಚ್ಚು ಸುರಕ್ಷಿತ ಮತ್ತು ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ತಿಗೊಳಿಸಬಹುದು ಎಂದು ನ್ಯಾಷನಲ್ ಇಂಫರ್ಮೇಷನ್ ಸೆಂಟರ್ ತಿಳಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು