ಕಫಾಲ ಸ್ಫಾನ್ಸರ್ ಶಿಫ್ ವ್ಯವಸ್ಥೆಗೆ ಮಹತ್ವದ ಸುಧಾರಣೆ ತಂದ ಸೌದಿ ಅರೇಬಿಯಾ

Share on facebook
Share on twitter
Share on linkedin
Share on whatsapp
Share on telegram
Share on email
Share on print

 

ರಿಯಾದ್ (04/11/2020): ಇನ್ನು ಮುಂದೆ ಸೌದಿ ಅರೇಬಿಯಾದಲ್ಲಿ ವಿದೇಶಿ ವಲಸೆ ಕಾರ್ಮಿಕರು ತಮ್ಮ ಸ್ಪಾನ್ಸರ್‌ಶಿಪ್ಪನ್ನು ಓರ್ವ ಮಾಲಕ ನಿಂದ ಇನ್ನೋರ್ವ ಮಾಲಕನಿಗೆ ವರ್ಗಾಯಿಸುವ ಮೂಲಕ ಬೇರೆ ಕಡೆ ಕೆಲಸ ಮಾಡಬಹುದಾಗಿದೆ ಎಂದು ಸೌದಿ ಅರೇಬಿಯಾ ಇಂದು ಘೋಷಿಸಿದೆ.

ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ವಲಸೆ ಕಾರ್ಮಿಕರನ್ನು ಅವರ ಮಾಲಕರ ಅಧೀನದಲ್ಲಿ ಉಳಿಸಿಕೊಳ್ಳುವ ನಿರ್ಬಂಧಗಳನ್ನು ಹೊಸ ಕಾನೂನು ಸುಧಾರಣೆಯ ಮೂಲಕ ತೆಗೆದುಹಾಕಲಾಗಿದೆ ಎಂದು ಮಾನವ ಸಂಪನ್ಮೂಲಗಳು ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.

ಮಾಲಕರ ಅನುಮತಿಯಿಲ್ಲದೆ ಸೌದಿ ಅರೇಬಿಯವನ್ನು ತೊರೆಯಬಹುದು ಮತ್ತು ಅಲ್ಲಿಗೆ ಮತ್ತೊಮ್ಮೆ ಪ್ರವೇಶ ಮಾಡಬಹುದಾಗಿದೆ ಹಾಗೂ ಅಂತಿಮ ನಿರ್ಗಮನ ವೀಸಾಗಳನ್ನು ಪಡೆಯಬಹುದಾಗಿದೆ.

ಇದುವರೆಗಿನ ‘ಕಫಾಲ’ ಸ್ಫಾನ್ಸರ್ ಶಿಫ್ ವ್ಯವಸ್ಥೆಗೆ ಮಾಡಿದ ಹೊಸ ಕಾರ್ಮಿಕ ಸುಧಾರಣೆಗಳು 2021 ಮಾರ್ಚ್‌ನಲ್ಲಿ ಜಾರಿಗೆ ಬರಲಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು