ಸ್ಪಾನ್ಸರ್‌ಶಿಪ್ ಪದ್ಧತಿಯನ್ನು ಕೊನೆಗೊಳಿಸಲಿರುವ ಸೌದಿ ಅರೇಬಿಯಾ || ಅನಿವಾಸಿಗಳಲ್ಲಿ ಸಂತಸದ ಛಾಯೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜಿದ್ದಾ(27-10-2020): ನಿತಾಕತ್ ಸುದ್ದಿಗಳ ನಡುವೆಯೂ ಸೌದಿ ಅರೇಬಿಯಾದಲ್ಲಿ ಸ್ಪಾನ್ಸರ್‌ಶಿಪ್ ಪದ್ಧತಿ ಕೊನೆಗೊಳ್ಳುವುದೆಂಬ ವಾರ್ತೆ ಬಂದಿದೆ. ಇದು ಅನಿವಾಸಿಗಳ ಪಾಲಿಗೆ ಸಿಹಿ ಸುದ್ದಿಯೆಂದು ಬಣ್ಣಿಸಲಾಗಿದೆ.

ಸ್ಪಾನ್ಸರ್‌ಶಿಪ್ ಕಾನೂನು ಸಂಪೂರ್ಣವಾಗಿ ಇಲ್ಲವಾಗುವುದೋ, ಭಾಗಶಃವಾಗಿ ಇಲ್ಲವಾಗುವುದೋ ಅಥವಾ ಅದರ ಬದಲು ಬೇರೆ ಕಾನೂನು ಜಾರಿಗೆ ಬರುವುದೋ ಎಂಬಿತ್ಯಾದಿ ವಿಷಯಗಳು ಇನ್ನೂ ಸ್ಪಷ್ಟವಾಗಿಲ್ಲ. ಮುಂದಿನ ವರ್ಷದಿಂದ ಜಾರಿಗೆ ಬರಲಿರುವ ಈ ಹೊಸ ನಿಯಮಗಳ ಬಗೆಗಿನ ಹೆಚ್ಚಿನ ವಿವರಗಳನ್ನು ಮುಂದಿನ ವಾರ ಪ್ರಕಟಿಸುವುದಾಗಿ ಸೌದಿ ಅರೇಬಿಯಾದ ಕಾರ್ಮಿಕ ಸಚಿವಾಲಯವು ತಿಳಿಸಿದೆ.

1950ರಲ್ಲಿ ಕೊಲ್ಲಿ ದೇಶಗಳಲ್ಲಿ ತೈಲ ನಿಕ್ಷೇಪಗಳು ಪತ್ತೆಯಾದಾಗ ಅಲ್ಲಿಗೆ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರ ಅಗತ್ಯವಿತ್ತು. ಅಗ ಸರಕಾರಗಳು ಕಫಾಲ ಎಂದು ಕರೆಯಲಾಗುವ ಸ್ಪಾನ್ಸರ್‌ಶಿಪ್ ಪದ್ಧತಿಯನ್ನು ಜಾರಿಗೆ ತಂದಿತ್ತು. ವಿದೇಶೀ ಕಾರ್ಮಿಕರ ಮೇಲ್ವಿಚಾರಣೆ, ಜವಾಬ್ದಾರಿಯನ್ನು ಸ್ಪಾನ್ಸರ್ ಹೊರಬೇಕಿತ್ತು. ಬಳಿಕ ಕಂಪೆನಿಗಳೂ ಇದೇ ಪದ್ಧತಿಯನ್ನು ವಿಸ್ತರಿಸಲಾಯಿತು.

ಸ್ಪಾನ್ಸರ್ ಪದ್ಧತಿಯನ್ನು ವಿವಿಧ ಮಾನವಹಕ್ಕು ಮತ್ತು ಕಾರ್ಮಿಕ ಸಂಘಟನೆಗಳು ವಿರೋಧಿಸುತ್ತಾ ಬಂದಿದೆ. ನ್ಯಾಯಾಲಯಗಳಲ್ಲೂ ಸ್ಪಾನ್ಸರ್ ಪರವಾಗಿ ಮತ್ತು ಉದ್ಯೋಗಿಯ ವಿರುದ್ಧವಾಗಿ ತೀರ್ಪುಗಳು ಬರುತ್ತಿವೆಯೆಂಬ ಆರೋಪವಿದೆ. ಸದ್ಯ ವಿದೇಶೀ ಉದ್ಯೋಗಿಗಳು ದೇಶದಿಂದ ಹೊರ ಹೋಗಲೂ, ಹೊಸ ಉದ್ಯೋಗಕ್ಕೆ ಸೇರಲೂ ಸ್ಪಾನ್ಸರಿನ ಅನುಮತಿ ಅಗತ್ಯವಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು