ರಾಯಚೂರು(09-10-2020): ಹೆತ್ತು, ಹೊತ್ತು, ಸಾಕಿದ ತಾಯಿಯನ್ನು ಮಗಳು ಮನೆಯಿಂದ ಹೊರ ಹಾಕಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಯರಮರಸ್ ನ ಭೀಮರಾಯ ಕ್ಯಾಂಪಿನಲ್ಲಿರುವ ಸರೋಜಮ್ಮ ಅವರನ್ನು 4ನೇ ಮಗಳು ನಾಗಮ್ಮ ಮನೆಯಿಂದ ಹೊರಹಾಕಿದ್ದಾರೆ. ನಾಗಮ್ಮ ಪತಿ 5 ವರ್ಷಗಳ ಹಿಂದೆ ತೀರಿಕೊಂಡಿದ್ದರು. ನಂತರ ಸರೋಜಮ್ಮ ಆಕೆಯನ್ನು ಕರೆದುಕೊಂಡು ಬಂದು ತನ್ನ ಮನೆಯಲ್ಲಿಯೇ ಆಶ್ರಯ ನೀಡಿದ್ದರು. ಆದರೆ, ನಾಗಮ್ಮ ತನ್ನ ತಾಯಿಯನ್ನು ಮನೆ ಬಿಟ್ಟು ಹೋಗು ಎಂದು ಆಕೆಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಳು.
ಮಗಳು ತನ್ನನ್ನು ಮನೆಯಿಂದ ಹೊರಹಾಕಲು ಮುಂದಾದಾಗ ವಕೀಲರ ಸಹಾಯದಿಂದ ರಾಯಚೂರಿನ ಹಿರಿಯ ನಾಗರಿಕ ಸಹಾಯವಾಣಿಗೆ ಹೋಗಿ ಸರೋಜಮ್ಮ ದೂರು ನೀಡಿದ್ದರು. ವಿಚಾರಣೆ ನಡೆಸಿದ ಸಹಾಯಕ ಆಯುಕ್ತರು, ಸರೋಜಮ್ಮ ವಾಸವಾಗಿರುವ ಮನೆ ಆಕೆ ಗಂಡ ಲಕ್ಷ್ಮಣ ಎಂಬವವರ ಆಸ್ತಿಯಾಗಿದ್ದರಿಂದ ಈ ಮನೆಯಲ್ಲಿ ಸರೋಜಮ್ಮ ಇರಬೇಕು. ತಾಯಿಗೆ ಕಿರುಕುಳ ನೀಡುವ ಮಗಳು ನಾಗಮ್ಮ ಮನೆಯಿಂದ ಹೊರ ಹೋಗಬೇಕೆಂದು ಸೂಚಿಸಿದ್ದಾರೆ.