ಸರ್ಕಾರ ಎಲ್ಲಾ ವರ್ಗದವರಿಗೂ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿ : ಡಿಕೆಶಿ ಒತ್ತಾಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕೋವಿಡ್ ಪರಿಸ್ಥಿತಿ ನಿರ್ವಹಿಸುವಲ್ಲಿ ವೈಫಲ್ಯವನ್ನು ಒಪ್ಪಿಕೊಳ್ಳದ ರಾಜ್ಯ ಬಿಜೆಪಿ ಸರ್ಕಾರ ಪರಿಸ್ಥಿತಿ ಕೈ ಮೀರಿದ್ದಾಗಿ ಹೇಳುತ್ತಿದೆ. ಪದ ಬಳಕೆ ಮಾಡದೆ ‘ಬಿಗಿಕ್ರಮ’ದ ಹೆಸರಲ್ಲಿ ಲಾಕ್‌ಡೌನ್‌ ಘೋಷಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಅಘೋಷಿತ ಲಾಕ್‌ಡೌನ್‌ನಿಂದಾಗಿ ನಷ್ಟಕ್ಕೊಳಗಾಗುವ ಎಲ್ಲ ವರ್ಗದವರಿಗೂ ಸರ್ಕಾರ ಸೂಕ್ತ ಪರಿಹಾರ ನೀಡಬೇಕು, ಆಟೋ, ಟ್ಯಾಕ್ಸಿ, ಟ್ರಾನ್ಸ್ ಪೋರ್ಟ್ ವಾಹನ ಚಾಲಕರಿಗೆ ರಕ್ಷಣೆ ನೀಡಬೇಕು,

ಫೈನಾನ್ಸಿಯರ್‌ಗಳು ಕೊಡುವ ಕಿರುಕುಳ ನಿಲ್ಲಿಸಬೇಕು. ಹೊಟೆಲ್, ಸಾರಿಗೆ, ರೆಸ್ಟೋರೆಂಟ್ ಉದ್ಯಮಗಳನ್ನು ಅಗತ್ಯ ಸೇವೆಗಳ ಪಟ್ಟಿಗೆ ಸೇರಿಸಬೇಕು. ಇಲ್ಲದಿದ್ದರೆ ರೈತರು, ಕಾರ್ಮಿಕರಂತೆಯೇ ವರ್ತಕರ ಪರವಾಗಿಯೂ ನಿಂತು ನಮ್ಮ ಪಕ್ಷ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಲಾಕ್ ಡೌನ್ ದಿಂದಾಗಿ 1 ವರ್ಷದಿಂದ ವ್ಯಾಪಾರ ನಿಂತಿದೆ, ವ್ಯಾಪಾರ ಚೇತರಿಕೆಗೆ ಇನ್ನೂ ಒಂದು ವರ್ಷ ಬೇಕು, ಕೋವಿಡ್ ಮಾರ್ಗಸೂಚಿ ನಿಯಮಗಳಿಂದ ಯಾರಿಗೆ ತೊಂದರೆ ಆದರೂ ಅವರಿಗೆ ಸರ್ಕಾರ ಪರಿಹಾರ ನೀಡಬೇಕು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ‌ ಮಾಡಬೇಕು. ಬಡ್ಡಿಮನ್ನಾ ಮಾಡಿ ಸಾಲ ಮರುಪಾವತಿ ಗಡುವು ಮುಂದೂಡಬೇಕು ಎಂದು ಡಿಕೆಶಿ ಆಗ್ರಹಿಸಿದರು.

ನಮ್ಮ ಮನವಿ ಒಪ್ಪಿಕೊಂಡು ಸರ್ಕಾರಿ ಲಸಿಕೆ ಕೇಂದ್ರದಲ್ಲಿ ಕೊರೊನಾ ಲಸಿಕೆ ನೀಡಲು ಸರ್ಕಾರ ಘೋಷಣೆ ಮಾಡಿದ್ದು ಸ್ವಾಗತಾರ್ಹ ಎಂದು ಡಿಕೆಶಿ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು