ಸರ್ಕಾರ ತಜ್ಞರ ವರದಿ ಕಸದ ಬುಟ್ಟಿಗೆ ಹಾಕಿದ ಪರಿಣಾಮದಿಂದ ಇಂತದ್ದೊಂದು ದುರಂತಕ್ಕೆ ಸಾಕ್ಷಿಯಾಗಿದೆ: ದಿನೇಶ್ ಗುಂಡೂರಾವ್ ಗರಂ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕೋವಿಡ್ 2ನೇ ಅಲೆಯ ಪರಿಣಾಮದ ಬಗ್ಗೆ ಕಳೆದ ನವೆಂಬರ್‌ನಲ್ಲಿ ತಜ್ಞರು ಕೊಟ್ಟಿದ್ದ ವರದಿಯನ್ನು ರಾಜ್ಯ ಸರ್ಕಾರ ಕಸದ ಬುಟ್ಟಿಗೆ ಹಾಕಿತ್ತು.
ಅದರ ಪರಿಣಾಮವನ್ನು ರಾಜ್ಯದ ಜನ ಈಗ ಅನುಭವಿಸುತ್ತಿದ್ದಾರೆ. ಸರ್ಕಾರ ಅಂದು ತಜ್ಞರ ವರದಿಯನ್ನು ಸ್ವಲ್ಪವೇ ಗಂಭೀರವಾಗಿ ಪರಿಗಣಿಸಿದ್ದರೂ ರಾಜ್ಯ ಇಂತದ್ದೊಂದು ದುರಂತಕ್ಕೆ ಸಾಕ್ಷಿಯಾಗುತ್ತಿರಲಿಲ್ಲ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು,
ರಾಜ್ಯ ಸರ್ಕಾರದ ಪಾಪದ ಫಲವನ್ನು ಜನ ಅನುಭವಿಸಬೇಕಾಗಿರುವುದು ದುರಂತ. ರಾಜ್ಯದಲ್ಲಿ ಆಗುತ್ತಿರುವ ಪ್ರತಿ ಕೊರೊನಾ ಸಾವಿನ ಹಿಂದೆಯೂ ಸರ್ಕಾರದ ಬೇಜವಬ್ಧಾರಿಯಿದೆ‌. ಅಂದು ತಜ್ಞರ ವರದಿ ಕಡೆಗಣಿಸಿ ಹುಡುಗಾಟವಾಡಿದ್ದ ಸರ್ಕಾರ, ಇಂದು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬಂತೆ ಕೊರೊನಾ ನಿಯಂತ್ರಿಸಲು ಹೆಣಗಾಡುವುದರಲ್ಲಿ ಏನರ್ಥವಿದೆ? ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೊರೊನಾ ಭೀಕರತೆಯ ಬಗ್ಗೆ ವಿಪಕ್ಷಗಳು ಆಗಲೇ ಸರ್ಕಾರವನ್ನು ಎಚ್ಚರಿಸಬೇಕಿತ್ತು ಎಂದು ಸಿ.ಟಿ.ರವಿ ಹೇಳಿದ್ದಾರೆ. ಬಿಜೆಪಿ ಸರ್ಕಾರ ವಿಪಕ್ಷಗಳ ಎಚ್ಚರಿಕೆಯನ್ನು ಯಾವಾಗ ಕಿವಿಗೆ ಹಾಕಿಕೊಂಡು ಪಾಲಿಸಿದೆ ಎಂದು ಸಿ.ಟಿ.ರವಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ. ವಿಪಕ್ಷಗಳ ಎಚ್ಚರಿಕೆ ಅಂದು ಕೂಡ ಸರ್ಕಾರಕ್ಕೆ ಅಪಥ್ಯವಾಗಿತ್ತು,ಇಂದು ಕೂಡ ಅಪಥ್ಯವಾಗಲಿದೆ. ಕೊರೊನಾ 2ನೇ ಅಲೆಯ ಪರಿಣಾಮದ ಬಗ್ಗೆ ತಜ್ಞರ ವರದಿಯನ್ನೇ ಕಾಲ ಕಸ ಮಾಡಿಕೊಂಡಿದ್ದ ಈ ಸರ್ಕಾರ ವಿಪಕ್ಷಗಳ ಎಚ್ಚರಿಕೆಯನ್ನು ಪಾಲಿಸಲು ಸಾಧ್ಯವಿತ್ತೆ? ಎಂದು ಸಿ.ಟಿ.ರವಿಗೆ ತಿರುಗೇಟು ನೀಡಿದ್ದಾರೆ.

ಹೊರುವವನಿಗೆ ಹೆಗಲು ಭಾರ ಎಂಬಂತೆ ಸಿ.ಟಿ.ರವಿಯವರು ನೆಪ ಹೇಳುವುದನ್ನು ಬಿಟ್ಟು ತಮ್ಮ ರಾಜ್ಯ ಸರ್ಕಾರದ ಅಸಮರ್ಥತೆಯನ್ನು ಒಪ್ಪಿಕೊಳ್ಳಲಿ.
ಕನಿಷ್ಟ ಆಗಲಾದರೂ ಮಾಡಿದ ಪಾಪದ ಭಾರ ಕಡಿಮೆಯಾಗಬಹುದು ಎಂದು ದಿನೇಶ್ ಗುಂಡೂರಾವ್ ಸಿ.ಟಿ.ರವಿಗೆ ಟಾಂಗ್ ಕೊಟ್ಟಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು