ಸರಿಯಾಗಿ ಕೆಲಸ ಮಾಡಿದರೆ ಬಿಎಸ್ ವೈ ಮಸ್ಕಿಯಲ್ಲಿ ಠಿಕಾಣಿ ಹೂಡುವ ಅಗತ್ಯವಿತ್ತೆ? : ಡಿಕೆಶಿ ಪ್ರಶ್ನೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಸ್ಕಿ ರಾಯಚೂರು): ಬಿಎಸ್ ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ ಅವರು ಮಸ್ಕಿ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದಾರೆ. ಸರಿಯಾಗಿ ಕೆಲಸ ಮಾಡಿದ್ದರೆ ಅದರ ಅಗತ್ಯವಿರುತಿತ್ತೇ? ಕೊರೊನಾ ವೇಳೆ ಕೇಂದ್ರ ಬಿಜೆಪಿ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಸಹಾಯ ಮಾಡಬಹುದಿತ್ತಲ್ಲವೇ? ಅವರು ಜನರನ್ನ ಹೇಗೆ ನಡೆಸಿಕೊಂಡರು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.

ಮಸ್ಕಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಕೋವಿಡ್ ವೇಳೆ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಸಂಕಷ್ಟದಲ್ಲಿರುವವರ ನೆರವಿಗೆ ಬಾರದಿದ್ದಾಗ ಇಡೀ ಕಾಂಗ್ರೆಸ್ ಪಕ್ಷ ಅವರ ಸಹಾಯಕ್ಕೆ ಧಾವಿಸಿತು. ಲಾಕ್‌ಡೌನ್‌ನಲ್ಲಿಯೂ ಬೀದಿಗಿಳಿದು ರೈತರ ಬೆಳೆ ಖರೀದಿಸಿ ಜನರಿಗೆ ಉಚಿತವಾಗಿ ಹಂಚಿತು. ವಲಸೆ ಕಾರ್ಮಿಕರ ಪ್ರಯಾಣ ವೆಚ್ಚ ಭರಿಸಲು ಮುಂದಾಯಿತು. ಸರ್ಕಾರ ಏನು ಮಾಡಿತು? ಎಂದು ಪ್ರಶ್ನಿಸಿದರು.

ಮಸ್ಕಿ ಕ್ಷೇತ್ರದಲ್ಲಿ ತಾವು ತೋರಿದ ಪ್ರೀತಿ, ಅಭಿಮಾನ, ಬಸನಗೌಡ ಅವರಿಗೆ ಕೊಟ್ಟ ಶಕ್ತಿಯನ್ನು ನಾವು ಮರೆಯಲು ಸಾಧ್ಯವಿಲ್ಲ. ಹಿಂದಿನ ಶಾಸಕರು, ನೀವು ನೀಡಿದ ಅಮೂಲ್ಯವಾದ ಮತಗಳನ್ನು, ಸ್ವಾಭಿಮಾನವನ್ನು ಮಾರಿಕೊಂಡು ನಿಮಗೆ ದ್ರೋಹ ಎಸಗಿದ್ದಾರೆ. ಅವರ ವಿಶ್ವಾಸ ದ್ರೋಹಕ್ಕೆ ತಕ್ಕ ಉತ್ತರ ನೀಡಲು ಈ ಉಪ ಚುನಾವಣೆ ನಿಮಗೆ ಸದಾವಕಾಶ ಎಂದು ಮತದಾರರಿಗೆ ಮನವಿ ಮಾಡಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು