ಸಾರಿಗೆ ನೌಕರರು ಮುಷ್ಕರ ಮುಂದುವರೆಸಿದರೆ ಜನರೇ ಖಾಸಗೀಕರಣದ ಬಗ್ಗೆ ಧ್ವನಿ ಎತ್ತುತ್ತಾರೆ : ಸಂಸದ ಪ್ರತಾಪ್ ಸಿಂಹ 

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮೈಸೂರು: ರೈತರನ್ನು ದಾರಿ ತಪ್ಪಿಸಿದ ರೈತ ಮುಖಂಡರೊಬ್ಬರು ಈಗ ಕೆಎಸ್ಆರ್ ಟಿಸಿ ನೌಕರರನ್ನು ದಾರಿ ತಪ್ಪಿಸುತ್ತಿದ್ದಾರೆ. ಆ ಮುಖಂಡನನ್ನು ನಾಯಕನನ್ನಾಗಿ ಮಾಡಿಕೊಂಡು ಹೋರಾಟ ಮಾಡುತ್ತಿರುವುದೇ ತಪ್ಪು ನಿರ್ಧಾರ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ನೌಕರರ ಮುಷ್ಕರವನ್ನು ಟೀಕಿಸಿದ್ದಾರೆ.

ಕೆಎಸ್ಆರ್ ಟಿಸಿ ಈಗ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಹೋರಾಟ ನಡೆಸುವುದು ಸರಿಯಲ್ಲ. ಈಗ ಹೋರಾಟ ಮುಂದುವರಿದರೆ ಖಾಸಗೀಕರಣದ ಧ್ವನಿ ಕೇಳು ಬರುತ್ತದೆ. ಜನರೇ ಖಾಸಗೀಕರಣದ ಬಗ್ಗೆ ಧ್ವನಿ ಎತ್ತುತ್ತಾರೆ. ಜನರು ಈ ರೀತಿ ಧ್ವನಿ ಎತ್ತುವಂತೆ ಮಾಡಬೇಡಿ. ಕೆಎಸ್​ಆರ್​ಟಿಸಿ ಸಿಬ್ಬಂದಿ ಮೇಲೆ ಮೇಲೆ ಜನರು ಇಟ್ಟಿರುವ ಪ್ರೀತಿ ಕಳೆದುಕೊಳ್ಳಬೇಡಿ ಎಂದು ಅವರು ಹೇಳಿದರು.

ಪ್ರೋ. ನಂಜುಡಸ್ವಾಮಿ, ಕೆ.ಎಸ್.ಪುಟ್ಟಣ್ಣಯ್ಯ ಅವರು ಇದ್ದಾಗ ರೈತರ ಬಗ್ಗೆ, ಹೋರಾಟದ ಬಗ್ಗೆ ಪ್ರೀತಿ ಗೌರವ ಇತ್ತು. ಅವರು ಅಸ್ತಂಗತ ಆದನಂತರ ಅದೆಲ್ಲವೂ ಇಲ್ಲವಾಗಿದೆ ಎಂದು ಅವರು ಹೇಳಿದರು. ಸಿದ್ದರಾಮಯ್ಯನವರು ಬೇಡಿಕೆ ಈಡೇರಿಸಿ ಎಂದು ಹೇಳುತ್ತಾರೆ. ಆದರೆ, ಅವರ ಸರ್ಕಾರದ ಅವಧಿಯಲ್ಲಿ ಈ ಕೆಲಸ ಮಾಡಬಹುದಿತ್ತಲ್ಲಾ? ಎಂದು ಅವರು ಪ್ರಶ್ನಿಸಿದರು.

ಸಾರ್ವಜನಿಕರ ಪ್ರೀತಿಗೆ ಗೌರವ ಕೊಟ್ಟು ಮುಷ್ಕರ ಹಿಂಪಡೆಯುವುದು ಸೂಕ್ತ, ಇಂಥ ಕಷ್ಟದ ಕಾಲದಲ್ಲಿ ಹೋರಾಟ ನಡೆಸುವುದು ಸಮಂಜಸ ಅಲ್ಲ ಎಂದು ಮನವಿ ಮಾಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು