ಸರಕಾರೀ ವೈದ್ಯಕೀಯ ಕಾಲೇಜಿಗಾಗಿ ಪ್ರತಿಭಟಿಸಿದ ಕರವೇ ಕಾರ್ಯಕರ್ತರ ಮೇಲೆ ಕೇಸು | ಬಿಜೆಪಿಯ ಕಾರ್ಯಕ್ರಮ ಮಾಡಿದವರ ಮೇಲೆ ಕೇಸು ಇಲ್ಲ! ಇಬ್ಬಗೆಯ ನೀತಿಯ ವಿರುದ್ಧ ಆಕ್ರೋಶ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಾಗಲಕೋಟೆ: ಸರಕಾರೀ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕೆಂದು ಆಗ್ರಹಿಸಿ ಪ್ರತಿಭಟಿಸಿದ, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರ ಮೇಲೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಇನ್ನಿತರ ಕಾಯ್ದೆಗಳಡಿ ಕೇಸು ದಾಖಲಿಸಲಾಗಿದೆ.

ಆದರೆ ಅದೇ ದಿನ ಬಾಗಲಕೋಟೆಯಲ್ಲೇ ಬಿಜೆಪಿ ಸಂಸ್ಥಾಪನಾ ದಿನಾಚರಣೆ ನಡೆದಿದ್ದರೂ, ಇದರಲ್ಲಿ ಭಾಗವಹಿಸಿದ ಯಾ ಮೇಲೂ ಕೇಸು ದಾಖಲಾಗಿಲ್ಲ. ಕಾರ್ಯಕ್ರಮದಲ್ಲಿ ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರವನ್ನೂ ಪಾಲಿಸದೇ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು ಎಂದು ಆರೋಪಿಸಲಾಗಿದೆ.

ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಾರ ಮೇಲೂ ಕೇಸು ದಾಖಲಾಗಿಲ್ಲ. ಸರಕಾರದ ಇಬ್ಬಗೆಯ ನೀತಿಯ ಬಗ್ಗೆ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೇ ಸಾಮಾಜಿಕ ಜಾಲತಾಣದಲ್ಲೂ ತಮ್ಮ ಅಸಮಧಾನವನ್ನು ಹಂಚಿಕೊಂಡಿದ್ದಾರೆ.

ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಬಾಗಲಕೋಟೆಗೆ ಸರಕಾರೀ ವೈದ್ಯಕೀಯ ಕಾಲೇಜು ಮಂಜೂರಾಗಿದ್ದರೂ ನಂತರ ದಿನಗಳಲ್ಲಿ ಯಾವುದೇ ಮುನ್ನಡೆ ಕಾಣದೇ ಕಾಲೇಜು ಸ್ಥಾಪನೆಯ ಪ್ರಕ್ರಿಯೆಯು ಸ್ಥಗಿತಗೊಂಡಿತ್ತು. ಹಿನ್ನೆಲೆಯಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ರಮೇಶ್ ಮದ್ನೂರ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯಲ್ಲಿ ಹತ್ತಾರು ಸಂಘಟನೆಗಳ ಸಾವಿರಾರು ಮಂದಿ ಭಾಗವಹಿಸಿದ್ದರು.

ಬಿಜೆಪಿಯ ಕಾರ್ಯಕ್ರಮಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯಿಸುವುದಿಲ್ಲವೇ? ಆಡಳಿತಾರೂಢ ಪಕ್ಷದವರಿಗೆ ಒಂದು ನಿಯಮ, ಸಾಮಾನ್ಯ ಜನರಿಗೆ ಇನ್ನೊಂದು ನಿಯಮವೇ? ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರೂ, ಕರವೇ ಸಾಮಾಜಿಕ ಜಾಲತಾಣ ಪ್ರಧಾನ ಸಂಚಾಲಕರೂ ಆಗಿರುವ ದಿನೇಶ್ ಕುಮಾರ್ ಪ್ರಶ್ನಿಸಿದ್ದಾರೆ.

ಬಗ್ಗೆ ಸಾಮಾಜಿಕ ಹೋರಾಟಗಾರರಾದ ಬಿ.ಆರ್ ಭಾಸ್ಕರ್ ಪ್ರಸಾದ್ ಅವರು ದೂರವಾಣಿ ಮೂಲಕ ಜಿಲ್ಲಾಧಿಕಾರಿ ಮತ್ತು ಪೋಲೀಸ್ ವರಿಷ್ಠಾಧಿಕಾರಿಗಳನ್ನು ಪ್ರಶ್ನಿಸಿದಾಗ ಜಿಲ್ಲಾಧಿಕಾರಿಯು, ನನ್ನ ಗಮನಕ್ಕೆ ಬಂದಿಲ್ಲ. ಸಂಜೆಯ ವೇಳೆ ನನ್ನ ವೆಬ್ಸೈಟಿಗೆ ಭೇಟಿ ನೀಡಿ, ತೆಗೆದುಕೊಂಡ ಕ್ರಮಗಳ ವಿವರಗಳನ್ನು ಪಡೆಯಿರಿ ಎಂದುತ್ತರಿಸಿದರೆ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಸದ್ಯ ಮೀಟಿಂಗಿನಲ್ಲಿರುವೆ. ಬಳಿಕ ಕರೆ ಮಾಡುವೆ ಎಂದು ಹೇಳಿ ಮಾತು ಮುಗಿಸಿದರು.

ಈಗಾಗಲೇ ಕೊರೋನಾ ಹೆಸರಿನಲ್ಲಿ ಸರಕಾರವು ಜನಪರ ಹೋರಾಟಗಳನ್ನು ಹತ್ತಿಕ್ಕುತ್ತಿದೆ ಎಂಬ ಆರೋಪಗಳು ಕೇಳಿ ಬಂದಿತ್ತು.  ಸಾಲಿಗೆ ಇನ್ನೊಂದು ಸೇರಿದಂತಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು