ಸರಕಾರೀ ನೌಕರರನ್ನು ಚುನಾವಣಾ ಆಯುಕ್ತರನ್ನಾಗಿಸುವ ಬಗೆಗೆ ಬಾಂಬೆ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಮ್ ಕೋರ್ಟ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಸರಕಾರೀ ನೌಕರರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸುವ ವಿಚಾರದಲ್ಲಿ ಬಾಂಬೆ ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಮ್ ಕೋರ್ಟ್ ಎತ್ತಿಹಿಡಿದಿದೆ.

ಕೇಂದ್ರ ಮತ್ತು ರಾಜ್ಯ ಸರಕಾರೀ ನೌಕಕರರನ್ನು ಆಯುಕ್ತರನ್ನಾಗಿ ನೇಮಿಸುವಂತಿಲ್ಲ ಎಂದು ಅದು ತೀರ್ಪಿತ್ತಿದೆ. ಹೀಗೆ ನೇಮಿಸುವುದು ಸಂವಿಧಾನದ ಅಣಕವೆಂದು ಬಣ್ಣಿಸಿದೆ.

ಚುನಾವಣಾ ಆಯೋಗವು ಸ್ವತಂತ್ರವಾಗಿದ್ದು, ಅದರ ಆಯುಕ್ತರು ಸ್ವತಂತ್ರ ವ್ಯಕ್ತಿಗಳಾಗಿರಬೇಕು ಎಂಬ ಹೈಕೋರ್ಟಿನ ತೀರ್ಪನ್ನು ನ್ಯಾಯಮೂರ್ತಿಗಳು ಎತ್ತಿಹಿಡಿದರು.

ಗೋವಾದ ಚುನಾವಣಾ ಆಯೋಗದ ಐದು ಪಾಲಿಕೆಗಳಿಗೆ ಹೊರಡಿಸಲಾಗಿದ್ದ ಚುನಾವಣಾ ಅಧಿಸೂಚನೆಯನ್ನು ಬಾಂಬೆ ಹೈಕೋರ್ಟ್ ವಜಾ ಗೊಳಿಸಿತ್ತು. ಇದನ್ನು ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯಲ್ಲಿ ಈ ತೀರ್ಪು ಹೊರ ಬಿದ್ದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು