ಸರಕಾರೀ ಆಸ್ಪತ್ರೆಯ ಆವರಣದಲ್ಲೇ ಒಂಭತ್ತು ವರ್ಷ ಹಿಂದಿನ ಗ್ಲುಕೋಸ್ ಮಾರಾಟ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚಿಕ್ಕಮಗಳೂರು: ಸರಕಾರೀ ಆಸ್ಪತ್ರೆಯ ಆವರಣದಲ್ಲೇ ಒಂಭತ್ತು ವರ್ಷ ಹಿಂದಿನ ಗ್ಲುಕೋಸ್ ಮಾರಾಟ ಮಾಡಿದ ಘಟನೆ ವರದಿಯಾಗಿದೆ.

ಚಿಕ್ಕಮಗಳೂರಿನ ಸರಕಾರೀ ಆಸ್ಪತ್ರೆಯ ಆವರಣದಲ್ಲಿರುವ ಮೆಡಿಕಲ್ ಸ್ಟೋರಿನಿಂದ ಗುರು ಎಂಬವರು ಗ್ಲುಕೋಸನ್ನು ಖರೀದಿಸಿದ್ದರು. ದಿನಾಂಕವನ್ನು ಪರಿಶೀಲಿಸಿದಾಗ ಅದು ಸರಿ ಸುಮಾರು ಒಂಭತ್ತು ವರ್ಷಗಳಷ್ಟು ಹಳೆಯದೆಂದು ಗೋಚರವಾಗಿದೆ.

ಖರೀದಿಸಿದ ಮೊದಲನೆಯ ಪ್ಯಾಕಿನಲ್ಲೇ ರೀತಿ ಹಳೆಯ ದಿನಾಂಕವನ್ನು ಕಂಡ ಅವರು ಪರೀಕ್ಷಾರ್ಥವಾಗಿ ಮತ್ತೊಂದು ಪ್ಯಾಕನ್ನೂ ಖರೀದಿಸಿದ್ದರು.

2012 ಇಸವಿಯ ಎಪ್ರಿಲ್ ತಿಂಗಳಿನಲ್ಲಿ ತಯಾರಾದದ್ದೆಂದು ನಮೂದಿಸಿದ ಲೇಬಲ್ ಮೇಲೆ, ಮೆಡಿಕಲ್ ಸ್ಟೋರ್ ನವರು 2021 ಎಂದು ನಮೂದಿಸಿದ ಹೊಸ ಲೇಬಲ್ ಹಾಕಿ ಮಾರಾಟ ಮಾಡಿದ್ದಾರೆಂದು ಗುರು ಅವರು ತಮಗಾದ ಅನುಭವವನ್ನು ಹಂಚಿಕೊಂಡಿರುವುದು.

ಸಾಮಾನ್ಯವಾಗಿ ಎರಡು ವರ್ಷಗಳ ಅವಧಿಯಿರುವ ಗ್ಲುಕೋಸನ್ನು ಸುಮಾರು ಒಂಭತ್ತು ವರ್ಷಗಳ ನಂತರ ಅದರ ಅರ್ಧಬೆಲೆಗೆ ಮಾರಾಟ ಮಾಡುವಂತಹಾ ಶೋಚನೀಯ ಪರಿಸ್ಥಿತಿಗೆ ಆರೋಗ್ಯ ಕ್ಷೇತ್ರವು ಮುಟ್ಟಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.

ಕೋವಿಡ್ ಮಹಾ ಮಾರಿಯು ತೀವ್ರಗತಿಯಲ್ಲಿರುವ ಸಮಯದಲ್ಲೇ ರೀತಿಯಾಗಿ ಗ್ರಾಹಕರನ್ನು ವಂಚಿಸಿ, ರೋಗಿಗಳ ಆರೋಗ್ಯವನ್ನು ಇನ್ನಷ್ಟು ಹದಗೆಡಿಸಲು ಕಾರಣವಾಗುತ್ತಿದ್ದಾರೆಂಬುದು ಇಲ್ಲಿ ಗಮನಾರ್ಹ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು