ಸರಕಾರದ ಆದೇಶಕ್ಕೆ ಮಣಿದ ಸಾಮಾಜಿಕ ಜಾಲತಾಣ ಸಂಸ್ಥೆಗಳು | ಟ್ವಿಟರ್ ನಿಲುವಿನಲ್ಲಿ ಇನ್ನೂ ಬದಲಾವಣೆಯಾಗಿಲ್ಲ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಒಕ್ಕೂಟ ಸರಕಾರವು ವರ್ಷದ ಫೆಬ್ರವರಿ ತಿಂಗಳಿನಲ್ಲಿ ಜಾರಿಗೆ ತಂದಿದ್ದ ನೂತನ ಐಟಿ ಮಾರ್ಗಸೂಚಿಗಳನ್ನು ಪ್ರಮುಖ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಪಾಲಿಸಿವೆ. ಆದರೆ ಟ್ವಿಟರ್ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ತಂದಿಲ್ಲ.

ನೂತನ ಮಾರ್ಗಸೂಚಿಗಳನ್ನು ಪಾಲಿಸಲು ತಿಂಗಳ ಇಪ್ಪತ್ತಾರನೇ ತಾರೀಖು ಅಂತಿಮ ಗಡುವಾಗಿತ್ತು. ಆದರೆ ಯಾವುದೇ ಮಾಧ್ಯಮಗಳು ಅದನ್ನು ಪಾಲಿಸಿರಲಿಲ್ಲ. ವಿಚಾರವಾಗಿ ವಾಟ್ಸಪ್ ನ್ಯಾಯಾಲಯದ ಮೆಟ್ಟಿಲೇರಿದ್ದರೆ, ಟ್ವಿಟರ್ ಸಂಸ್ಥೆಯು ಸರಕಾರವನ್ನು ಬಹಿರಂಗವಾಗಿ ಟೀಕಿಸಿತ್ತು.

ಸರಕಾರದ ನೂತನ ಕಾನೂನಿನ ಬಗ್ಗೆವ್ಯಕ್ತಿಯ ಖಾಸಗಿತನದ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಎಂದು ಟ್ವಿಟರ್ ಟೀಕಿಸಿತ್ತು. ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದ ಸರಕಾರ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಸಾಮಾಜಿಕ ಜಾಲತಾಣ ಸಂಸ್ಥಗಳು ಆದೇಶ ನೀಡಲು ಅದಕ್ಕೆ ಸಾಧ್ಯವಿಲ್ಲ. ದೇಶದ ಕಾನೂನಿಗೆಎಲ್ಲರೂ ಬದ್ಧರಾಗಲೇ ಬೇಕೆಂದು ಹೇಳಿತ್ತು. ಪ್ರತಿಕ್ರಿಯೆಯು ಟ್ವಿಟರಿಗೆ ಮಾತ್ರವಲ್ಲದೇ ಉಳಿದೆಲ್ಲಾ ಸಂಸ್ಥೆಗಳಿಗೆ ನೀಡಿದ ಎಚ್ಚರಿಕೆಯೂ ಆಗಿತ್ತು.

ಇದೀಗ ಸರಕಾರ ನೀಡಿದ ಎಚ್ಚರಿಕೆಗೆ ಮಣಿದ ಸಂಸ್ಥೆಗಳು, ತಮ್ಮಲ್ಲಿ ಪ್ರಕಟಿಸುವ ವಿಚಾರಗಳ ಬಗೆಗಿನ ದೂರುಗಳನ್ನು ಪರಿಶೀಲಿಸಲು ಅಧಿಕಾರಿಗಳನ್ನು ನೇಮಿಸಿದೆ. ಗೂಗಲ್, ಫೇಸ್ಬುಕ್, ಲಿಂಕ್ಡಿನ್, ಶೇರ್ ಚಾಟ್ ಸೇರಿದಂತೆ  ಎಲ್ಲಾ ಪ್ರಮುಖ ಸಂಸ್ಥೆಗಳು ತಾವು ನೇಮಿಸಿರುವ ಅಧಿಕಾರಿಗಳ ಹೆಸರು, ವಿಳಾಸ, ಸಂಪರ್ಕ ಮತ್ತಿತರ ಮಾಹಿತಿಗಳನ್ನು ಸರಕಾರಕ್ಕೆ ಹಸ್ತಾಂತರಿಸಿವೆ. ವಿಚಾರವಾಗಿ ಸರಕಾರದ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಧುಮುಕಿದ ವಾಟ್ಸಪ್ ಸಂಸ್ಥೆಯೂ ಕೂಡಾ ಇದರಲ್ಲಿ ಸೇರಿದೆ ಎನ್ನುವುದು ವಿಶೇಷ.

ಈಗಲೂ ಕೂಡಾ ಟ್ವಿಟರ್ ಸರಕಾರದ ಆದೇಶವನ್ನು ಪಾಲಿಸಲು ಮುಂದಾಗಿಲ್ಲ. ದೂರು ಪರಿಶೀಲಿಸುವ ಅಧಿಕಾರಿಯನ್ನೂ ನೇಮಿಸಿಲ್ಲವೆಂದು ತಿಳಿದುಬಂದಿದೆ.

ನೂತನ ಮಾರ್ಗಸೂಚಿಯಂತೆ ಕಾನೂನಿಗೆ ವಿರುದ್ಧವಾದ ವಿಚಾರಗಳನ್ನು ಯಾರಾದರೂ ಪ್ರಕಟಿಸಿದರೆ, ಅದರ ಜವಾಬ್ಧಾರಿಯನ್ನು ಸಾಮಾಜಿಕ ಜಾಲತಾಣ ಸಂಸ್ಥೆಗಳೂ ಹೊರಬೇಕಿದೆ. ಜೊತೆಗೆ ತನ್ನ ಜಾಲತಾಣದಲ್ಲಿ ನಡೆಯುತ್ತಿರುವ ಅಪರಾಧಗಳ ಬಗೆಗಿನ ದೂರುಗಳನ್ನು ಪರಿಶೀಲಿಸಲು ಅಧಿಕಾರಿಯೊಬ್ಬರನ್ನು ನೇಮಿಸಬೇಕಿದೆ ಮತ್ತು ಭಾರತದ ಕಾನೂನಿಗೆ ವಿರುದ್ಧವಾದ ಅಂಶಗಳು ಕಂಡು ಬಂದರೆ ಅವುಗಳನ್ನು ತೆಗೆದು ಹಾಕಬೇಕಿದೆ. ಅಧಿಕಾರಿಯು ಸಮಯಸಮಯಕ್ಕೆ ಸರಕಾರ ಕೊಡುವ ಸೂಚನೆಗಳನ್ನು ಅನುಸರಿಸಬೇಕಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು