ಸಂಕಷ್ಟದಲ್ಲಿರುವ ಉದ್ಯೋಗಸ್ಥರು ಹಾಗೂ ಉದ್ಯೋಗದಾತರ ನೆರವಿಗೆ ಸರ್ಕಾರ ಬರಬೇಕು: ಡಿ.ಕೆ.ಶಿವಕುಮಾರ್ ಆಗ್ರಹ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಲೇ ಬೇಕು. ಸಂಗ್ರಹಿಸಿಡಲು ಸಾಧ್ಯವಿಲ್ಲದ ಹೂವು, ಹಣ್ಣು, ತರಕಾರಿ ಬೆಳೆದ ರೈತರು, ವೃತ್ತಿ ಆಧಾರಿತ ಕಾರ್ಮಿಕರು, ವರ್ತಕರಿಗೆ ಯಾವ ರೀತಿ ಪರಿಹಾರ ನೀಡಬೇಕು ಎನ್ನುವುದನ್ನು ಸರ್ಕಾರ ಇನ್ನೂ ಯೋಚಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಸಂಕಷ್ಟದಲ್ಲಿರುವ ಉದ್ಯೋಗಸ್ಥರು ಹಾಗೂ ಉದ್ಯೋಗದಾತರ ನೆರವಿಗೆ ಸರ್ಕಾರ ಬರಬೇಕು.
ಗ್ಲೋಬಲ್ ಟೆಂಡರ್ ಮಾಡಿ ಏಜೆಂಟರ ಮೂಲಕ ಕಮೀಷನ್ ಹೊಡೆಯುವ ಬಿಜೆಪಿ ಸರ್ಕಾರದ ಯೋಜನೆ ನಮಗೆ ತಿಳಿದಿಲ್ಲ ಎಂದು ಭಾವಿಸಿದ್ದಾರಾ?
ರೂ.100 ಕೋಟಿ ಬಳಕೆಗೆ ಸರ್ಕಾರದ ಅನುಮತಿ ಕೇಳಿದ್ದು, ಈ ಹಣವನ್ನ ಹೇಗೆ ಪಾರದರ್ಶಕವಾಗಿ ಜನರಿಗೆ ಲಸಿಕೆ ಕೊಡಲು ಬಳಸುತ್ತೇವೆ ಎಂದು ನೋಡಿ. ನಮಗೂ ಒಂದಷ್ಟು ಅನುಭವವಿದೆ ಎಂದಿದ್ದಾರೆ.

ಇಡೀ ದೇಶದಲ್ಲೇ ಅತ್ಯುತ್ತಮ ವೈದ್ಯಕೀಯ ಸೌಲಭ್ಯವಿರುವ ರಾಜ್ಯ ಕರ್ನಾಟಕ. ಇಲ್ಲಿಯೇ ಜನರಿಗೆ ಉತ್ತಮ ಆರೋಗ್ಯ ಸೇವೆ ಕೊಡಲು ಸರ್ಕಾರ ವಿಫಲವಾಗಿದೆ. ಇಲ್ಲಿಯ ಮೆಡಿಕಲ್ ಕಾಲೇಜು, ವೈದ್ಯರು, ನರ್ಸ್, ದಾದಿಯರು, ವೈದ್ಯಕೀಯ ಸಿಬ್ಬಂದಿ, ಸೌಲಭ್ಯ ಬಳಸಿಕೊಂಡು ಜನರನ್ನು ಉಳಿಸಲು ಸಾಧ್ಯವಾಗಿಲ್ಲ ಎಂದರೆ ಈ ಸರ್ಕಾರದಿಂದ ಇನ್ನೇನು ಸಾಧ್ಯ? ಎಂದು ಟೀಕಿಸಿದರು.

ಈ ದೇಶದ ಪ್ರಧಾನಿಗಳಿಗೆ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಇದಕ್ಕಾಗಿ ಅವರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ, ಅವರಿಂದ ವಿವರಣೆ ಪಡೆದಿದ್ದಾರೆ. ಆದರೆ ಸಚಿವರು, ಜಿಲ್ಲಾಧಿಕಾರಿಗಳನ್ನು ಹಿಂದಕ್ಕಿಟ್ಟು, ತಾವೇ ಮುಂದೆ ಕುಳಿತು ಎಲ್ಲಾ ಸೇವೆ ಮಾಡುತ್ತಿರುವವರಂತೆ ಪ್ರಧಾನಿಗಳ ಎದುರು ಬೀಗುತ್ತಿದ್ದರು ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು