ಬಿಹಾರದ ಮುಂದಿನ ಮುಖ್ಯಮಂತ್ರಿ ತೇಜಸ್ವಿ ಯಾದವ್: ಸಂಜಯ್ ರಾವತ್ ಭವಿಷ್ಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

 

ಮುಂಬೈ(31/10/2020): ರಾಷ್ಟ್ರೀಯ ಜನತಾದಳದ ನಾಯಕ ತೇಜಶ್ವಿ ಯಾದವ್ ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್‌ ಹೇಳಿದ್ದಾರೆ.

ಪುಣೆಯ ಪತ್ರಕರ್ತರ ಸಂಘ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾವುತ್‌, ಉತ್ತರದ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಗಳತ್ತ ಎಲ್ಲ ಕಣ್ಣುಗಳಿವೆ.

‘ಬಿಹಾರದಲ್ಲಿ ಯಾವುದೇ ಬೆಂಬಲವಿಲ್ಲದ ಯುವಕನೊಬ್ಬನಿದ್ದಾನೆ. ಸಿಬಿಐ ಮತ್ತು ಇಡಿಯಂತಹ ತನಿಖಾ ಸಂಸ್ಥೆಗಳು ಅವನನ್ನು ಕಾಡುತ್ತಿವೆ. ಆತ ಕೇಂದ್ರ ಸರ್ಕಾರಕ್ಕೇ ಸವಾಲು ಹಾಕುತ್ತಿದ್ದಾನೆ. ಹೀಗಾಗಿ ಇದು, ವಿರೋಧ ಪಕ್ಷಗಳಿಗೆ ಆಶ್ಚರ್ಯ ಉಂಟು ಮಾಡುತ್ತಿದೆ’ ಎಂದು ಸೇನಾ ನಾಯಕ ತೇಜಸ್ವಿ ಉಲ್ಲೇಖಿಸಿ ಹೇಳಿದರು.

‘ಆದ್ದರಿಂದ, ಅವರು ಬಿಹಾರದ ಮುಖ್ಯಮಂತ್ರಿಯಾದರೆ ನನಗೆ ಆಶ್ಚರ್ಯವಾಗುವುದಿಲ್ಲ’ ಎಂದು ರಾವುತ್‌ ಹೇಳಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು