ಸಿಯೋಲ್(25-10-2020): ದಕ್ಷಿಣ ಕೊರಿಯಾದ ಸಂಸ್ಥೆಯನ್ನು ಜಾಗತಿಕ ದೈತ್ಯವನ್ನಾಗಿ ಪರಿವರ್ತಿಸಿದ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಲೀ ಕುನ್-ಹೀ ಅವರು 78 ನೇ ವಯಸ್ಸಿನಲ್ಲಿ ಇಂದು ನಿಧನರಾದರು ಎಂದು ಕಂಪನಿ ತಿಳಿಸಿದೆ.
ಲೀ ಅವರ ನಾಯಕತ್ವದಲ್ಲಿ, ಸ್ಯಾಮ್ಸಂಗ್ ವಿಶ್ವದ ಅತಿದೊಡ್ಡ ಸ್ಮಾರ್ಟ್ಫೋನ್ಗಳು ಮತ್ತು ಮೆಮೊರಿ ಚಿಪ್ಗಳ ಉತ್ಪಾದಕವಾಗಿ ಪ್ರಾಶಸ್ತ್ಯ ಪಡೆದಿತ್ತು ಮತ್ತು ಸಂಸ್ಥೆಯ ಒಟ್ಟಾರೆ ವಹಿವಾಟು ಇಂದು ದಕ್ಷಿಣ ಕೊರಿಯಾದ ಜಿಡಿಪಿಯ ಐದನೇ ಒಂದು ಭಾಗಕ್ಕೆ ಸಮನಾಗಿದೆ.
ಏಕಾಂತ ಜೀವನಶೈಲಿಗೆ ಹೆಸರುವಾಸಿಯಾದ ಲೀ ಅವರು 2014 ರಲ್ಲಿ ಹೃದಯಾಘಾತದಿಂದ ಹಾಸಿಗೆ ಹಿಡಿದಿದ್ದರು. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅವರ ಅಂತಿಮ ದಿನಗಳಲ್ಲಿಯೂ ಸಹ ರಹಸ್ಯದಲ್ಲಿ ಇಡಲಾಗಿತ್ತು.
ನಿಜವಾದ ದೂರದೃಷ್ಟಿಯುಳ್ಳವರಾಗಿದ್ದು, ಅವರು ಸ್ಥಳೀಯ ವ್ಯವಹಾರದಿಂದ ಸ್ಯಾಮ್ಸಂಗ್ ನ್ನು ವಿಶ್ವದ ಪ್ರಮುಖ ನವೀನ ಮತ್ತು ಕೈಗಾರಿಕಾ ಶಕ್ತಿ ಕೇಂದ್ರವಾಗಿ ಪರಿವರ್ತಿಸಿದರು ಎಂದು ಸಂಸ್ಥೆ ಹೇಳಿದೆ.
ದಕ್ಷಿಣ ಕೊರಿಯಾದಲ್ಲಿ ವ್ಯವಹಾರದಲ್ಲಿ ಪ್ರಾಬಲ್ಯ ಹೊಂದಿರುವ ಕುಟುಂಬ ಲೀಯದ್ದಾಗಿದ್ದು, ಯುದ್ಧದ ವಿನಾಶದಿಂದ ಕಂಗೆಟ್ಟಿದ್ದ ದಕ್ಷಿಣ ಕೊರಿಯಾವನ್ನು ವಿಶ್ವದ 12 ನೇ ಅತಿದೊಡ್ಡ ಆರ್ಥಿಕತೆಗೆ ಬದಲಾವಣೆ ಮಾಡಿದ ಕೀರ್ತಿಗೆ ಲೀ ಕುನ್-ಹೀ ಕಾರಣರಾಗಿದ್ದಾರೆ.